Skip to main content


ಕೆಸಿಸಿ ಟಿ-10 ಕ್ರಿಕೆಟ್‌ ಲೀಗ್‌ ಪ್ರಾರಂಭ

ಸುದೀಪ್‌ ನೇತೃತ್ವದಲ್ಲಿ ಶುರುವಾಗಿರುವ "ಕೆಸಿಸಿ ಟಿ-10' (ಕರ್ನಾಟಕ ಚಲನಚಿತ್ರ ಕ್ರಿಕೆಟ್‌ ಕಪ್‌) ಕ್ರಿಕೆಟ್‌ ಲೀಗ್‌ಗೆ ಕೊನೆಗೂ ಶನಿವಾರ ಚಾಲನೆ ಸಿಕ್ಕಿದೆ. ಶನಿವಾರ ಬೆಳಿಗ್ಗೆ ನೆಲಮಂಗಲ ಬಳಿಯ ಕ್ರೀಡಾಂಗಣದಲ್ಲಿ ಈ ಕ್ರಿಕೆಟ್‌ ಪಂದ್ಯಾವಳಿಗೆ ಚಾಲನೆ ಸಿಕ್ಕಿದೆ. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು, ಜಗ್ಗೇಶ್‌ ಸೇರಿದಂತೆ ಹಲವರು ಭಾಗವಹಿಸಿದ್ದರು. ಈ ಕ್ರಿಕೆಟ್‌ ಲೀಗ್‌ನಲ್ಲಿ ಆರು ತಂಡಗಳಿದ್ದು, ಆ ತಂಡಗಳಲ್ಲಿ ಶಿವರಾಜಕುಮಾರ್‌, ಪುನೀತ್‌ ರಾಜ್‌ಕುಮಾರ್‌, ಸುದೀಪ್‌, ರಕ್ಷಿತ್‌ ಶೆಟ್ಟಿ, ಯಶ್‌ ಮತ್ತು ದಿಗಂತ್‌ ಆಡಲಿದ್ದಾರೆ.      

short by Pawan / read more at Udayavani


Comments