Skip to main content


ತಿಂಗಳಿಗೆ 10 ಲಕ್ಷ ರೂ. ಪರಿಹಾರ ಕೇಳ್ತಿದ್ದಾಳೆ ಕ್ರಿಕೆಟಿಗನ ಪತ್ನಿ

ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ವಿರುದ್ಧ ಅಲಿಪೋರ್ ಕೋರ್ಟ್ ನಲ್ಲಿ ಪತ್ನಿ ಹಸೀನ್ ಜಹಾಂ ಪ್ರಕರಣ ದಾಖಲಿಸಿದ್ದಾರೆ. ಪ್ರತಿ ತಿಂಗಳು ತನ್ನ ಮತ್ತು ಮಗಳ ಜೀವನ ನಿರ್ವಹಣೆಗಾಗಿ 10 ಲಕ್ಷ ರೂಪಾಯಿ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಹಾಗಾಗಿ 15 ದಿನಗಳೊಳಗೆ ವಿಚಾರಣೆಗೆ ಹಾಜರಾಗಿ ಈ ಸಂಬಂಧ ಕೋರ್ಟ್ ಗೆ ಪ್ರತಿಕ್ರಿಯೆ ತಿಳಿಸುವಂತೆ ಮೊಹಮ್ಮದ್ ಶಮಿಗೆ ನ್ಯಾಯಾಲಯ ಸಮನ್ಸ್ ನೀಡಿದೆ. ಮೇ 4ಕ್ಕೆ ವಿಚಾರಣಾ ದಿನಾಂಕವನ್ನು ನಿಗದಿ ಮಾಡಲಾಗಿದೆ.

ಮಾರ್ಚ್ 8 ರಂದು ಶಮಿ, ತಾಯಿ ಅಂಜುಮನ್ ಅರಾ ಬೇಗಂ, ಸಹೋದರಿ ಸಬೀನಾ ಅಂಜುಮ್, ಸಹೋದರ ಮೊಹಮ್ಮದ್ ಹಸೀಬ್ ಅಹಮದ್, ಆತನ ಪತ್ನಿ ಶಮಾ ಪರ್ವೀನ್ ವಿರುದ್ಧ ಹಸೀನ್ ಜಹಾಂ ಗೃಹ ಹಿಂಸೆ ಪ್ರಕರಣ ದಾಖಲು ಮಾಡಿದ್ದರು. ಅಷ್ಟೇ ಅಲ್ಲ ಶಮಿಗೆ ಹಲವು ಮಹಿಳೆಯರೊಂದಿಗೆ ಅಕ್ರಮ ಸಂಬಂಧವಿದೆಯೆಂದು ಆರೋಪ ಮಾಡಿದ್ದ ಹಸೀನ್ ಜಹಾಂ, ಅದಕ್ಕೆ ಸಂಬಂಧಿಸಿದ ಮೆಸೇಜ್ ಹಾಗೂ ಆಡಿಯೋವನ್ನು ರಿಲೀಸ್ ಮಾಡಿದ್ದರು.

short by: Nithin / read more at Kannadadunia

Comments