Skip to main content


ಹೊಸದಿಲ್ಲಿ: ಯುವತಿಯನ್ನು ಅಪಹರಿಸಿ 10 ದಿನ ನಿರಂತರ ಅತ್ಯಾಚಾರ

ದೆಹಲಿಯ ಅಮನ್ ವಿಹಾರ್‌ನಲ್ಲಿ ಈ ಘಟನೆ ನಡೆದಿದ್ದು, ಯುವತಿಯನ್ನು ಮನೆಯೊಂದರಲ್ಲಿ ಕೂಡಿಹಾಕಿದ 30 ವರ್ಷದ ವ್ಯಕ್ತಿಯೊಬ್ಬ ಹತ್ತು ದಿನಗಳ ಕಾಲ ನಿರಂತರವಾಗಿ ಲೈಂಗಿಕ ಶೋಷಣೆ ಮಾಡಿದ ಎಂದು ಆಪಾದಿಸಲಾಗಿದೆ. ಗಂಭೀರ ಸ್ವರೂಪದ ಗಾಯಗಳಾಗಿರುವ ಯುವತಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಕೌನ್ಸಿಲಿಂಗ್ ನೀಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಶಂಕಿತ ಆರೋಪಿಯನ್ನು ಕುಲದೀಪ್ ಎಂದು ಗುರುತಿಸಲಾಗಿದ್ದು, ಎಫ್‌ಐಆರ್ ದಾಖಲಾದ ಎ. 9ರಿಂದ ಆತ ನಾಪತ್ತೆಯಾಗಿದ್ದಾನೆ. ಯುವತಿ ಗೃಹ ಬಂಧನದಿಂದ ಅದೇ ದಿನ ತಪ್ಪಿಸಿಕೊಂಡಿದ್ದಾಳೆ. ಕೆಲ ತಿಂಗಳುಗಳಿಂದ ಕುಲದೀಪ್ ಆಕೆಗೆ ಕೀಟಲೆ ಮಾಡುತ್ತಿದ್ದ ಎಂದು ಯುವತಿ ಆಪಾದಿಸಿದ್ದಾಳೆ.    

short by Pawan / read more at Varthabharathi

Comments