Skip to main content


ಅಣ್ಣನಿಗೆ ನ್ಯಾಯ ಕೊಡಿಸಲು 10 ನೇ ತರಗತಿ ವಿದ್ಯಾರ್ಥಿ ಮಾಡಿದ್ದೇನು?

ಮಹಾರಾಜ್ ಗಂಜ್ ನ ಸಾದಿಕ್ ಅನ್ಸಾರಿ ಎಂಬಾತ ದುಬೈನಲ್ಲಿ ಕೆಲಸ ಕೊಡಿಸೋದಾಗಿ ಹೇಳಿ 45,000 ರೂಪಾಯಿ ಪಡೆದಿದ್ದ. ಆದ್ರೆ ಮಾತಿಗೆ ತಪ್ಪಿದ ಸಾದಿಕ್ ಕೆಲಸ ಹಾಗಿರಲಿ ಪಡೆದ ಹಣವನ್ನು ಸಹ ಹಿಂದಿರುಗಿಸಿರಲಿಲ್ಲ. ಬಳಿಕ ಬಾಲಕನ ಸೋದರ ಗುಲ್ಹಾರಿಯಾ ಬಜಾರ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದ. ಆದ್ರೆ ಪೊಲೀಸರು ಆರೋಪಿ ವಿರುದ್ಧ ಕ್ರಮವನ್ನೇ ಕೈಗೊಂಡಿರಲಿಲ್ಲ. ಹಲವು ಬಾರಿ ಪೊಲೀಸ್ ಠಾಣೆಗೆ ಅಲೆದರೂ ಖಾಕಿಗಳು ಮಾತ್ರ ಮೋಸ ಹೋದ ಯುವಕನಿಗೆ ಸಹಾಯ ಮಾಡಲೇ ಇಲ್ಲ. ಇದರಿಂದ ಬೇಸತ್ತ ವಿದ್ಯಾರ್ಥಿ ತನ್ನ ಸ್ನೇಹಿತನ ಮೊಬೈಲ್ ಪಡೆದು, ಡಿಜಿಪಿ ಹೆಸರಲ್ಲಿ ನಕಲಿ ಟ್ವಿಟ್ಟರ್ ಖಾತೆ ತೆರೆದಿದ್ದ. ಕೂಡಲೇ ಚೀಟಿಂಗ್ ಕೇಸ್ ಬಗೆಹರಿಸುವಂತೆ ಟ್ವಿಟ್ಟರ್ ಮೂಲಕ ತಾನೇ ಗೋರಖ್ಪುರ ಎಸ್ ಎಸ್ ಪಿಗೆ ಸೂಚನೆ ನೀಡಿದ್ದಾನೆ. ಈ ಪ್ಲಾನ್ ವರ್ಕೌಟ್ ಆಯ್ತು. ಡಿಜಿಪಿಯಿಂದ್ಲೇ ಸೂಚನೆ ಬಂದಿದೆ ಎಂದುಕೊಂಡು ಪೊಲೀಸರು ಕೂಡಲೇ ಕಾರ್ಯಾಚರಣೆಗಿಳಿದ್ರು. ವಂಚಕ ಅನ್ಸಾರಿಗೆ ಕರೆ ಮಾಡಿದ್ರು, ಆತ ತಕ್ಷಣವೇ 30,000 ರೂಪಾಯಿಯನ್ನು ಹಿಂದಿರುಗಿಸಲು ಒಪ್ಪಿಕೊಂಡ. ಇತ್ತ ತಮ್ಮ ಹೆಸರಲ್ಲಿ ನಕಲಿ ಟ್ವಿಟ್ಟರ್ ಖಾತೆ ತೆರೆದಿರುವ ಬಗ್ಗೆ ಡಿಜಿಪಿ ಸೈಬರ್ ಸೆಲ್ ಗೆ ಮಾಹಿತಿ ನೀಡಿದ್ದರು. ತನಿಖೆ ನಡೆಸಿದಾಗ ಇದು ಬಾಲಕನ ಕೃತ್ಯ ಅನ್ನೋದು ಬೆಳಕಿಗೆ ಬಂದಿದೆ.     

short by Pawan / read more at Kannadadunia


Comments