Skip to main content


ಕೆಸಿಸಿ ಟಿ-10 ಕಪ್‌‌ ಮುಡಿಗೇರಿಸಿಕೊಂಡ ಶಿವರಾಜಕುಮಾರ್ ತಂಡ

ಸುದೀಪ್ ನೇತೃತ್ವದಲ್ಲಿ ಶನಿವಾರ `ಕೆಸಿಸಿ ಟಿ-10' ಕ್ರಿಕೆಟ್ ಲೀಗ್ ಶುರುವಾಗಿದ್ದು ಗೊತ್ತೇ ಇದೆ. ಈ ಪಂದ್ಯಾವಳಿಯನ್ನು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಿದ್ದರು. ಎರಡು ದಿನಗಳ ಈ ಪಂದ್ಯಾವಳಿ ನಿನ್ನೆ ಸಂಜೆ ಮುಗಿದಿದ್ದು, ಶಿವರಾಜಕುಮಾರ್ ಅವರ ನೇತೃತ್ವದ ತಂಡ ಮೊದಲ ಕಪ್ ಗೆದ್ದುಕೊಂಡಿದೆ.ನೆಲಮಂಗಲದ ಬಳಿ ಇರುವ ಆದಿತ್ಯ ಗ್ರೌಂಡ್ಸ್‌‌ನಲ್ಲಿ ನಡೆದ ಪಂದ್ಯಾವಳಿಯ ಫೈನಲ್ಸ್‌‌ನಲ್ಲಿ `ಒಡೆಯರ್ ಚಾರ್ಜರ್ಸ್' ತಂಡದ ಎದುರು ಆಡಿದ `ವಿಜಯನಗರ ಪೇಟ್ರಿಯಾಟ್ಸ್' ತಂಡವು, ಕೆಸಿಸಿಯ ಮೊದಲ ಸೀಸನ್‍ನಲ್ಲಿ ಚಾಂಪಿಯನ್ ಎನಿಸಿಕೊಂಡಿದೆ.

short by: Nithin / read more at EenaduIndia


Comments