Skip to main content


ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿಗೆ ಮತ್ತೊಂದ್ ಶಾಕ್: ನಿಧಾನಗತಿಯ ಓವರ್ ಗೆ 12 ಲಕ್ಷ ರೂ. ದಂಡ

ಸೋಲಿನಿಂದ ಕಂಗೆಟ್ಟಿರುವ ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿಗೆ ಮತ್ತೊಂದು ಶಾಕಿಂಗ್ ಸುದ್ದಿ ಸಿಕ್ಕಿದೆ ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ  ಚೆನ್ನೈ ಸೂಪರ್​ ಕಿಂಗ್ಸ್ ವಿರುದ್ಧ ಪಂದ್ಯದ ವೇಳೆಯಲ್ಲಿ ನಿಧಾನಗತಿಯಲ್ಲಿ ಓವರ್​ ಪೂರ್ಣಗೊಳಿಸಿದ್ದಕ್ಕಾಗಿ  12 ಲಕ್ಷ ರೂ. ದಂಡ ವಿಧಿಸಲಾಗಿದೆ. ವಿರಾಟ್ ಕೊಹ್ಲಿಗೆ ನೀಡಿರುವ ದಂಡ ಈ ಬಾರಿಯ ಐಪಿಲ್  ಆರ್​ಸಿಬಿ ತಂಡದ ಮೊದಲ ನಿಯಮ ಉಲ್ಲಂಘನೆ. ಹಾಗಾಗಿ ಐಪಿಲ್​ ನಿಯಮಾನುಸಾರ ನಿಧಾನಗತಿಯಲ್ಲಿ ಓವರ್​ ಮುಗಿಸಿದ ವಿರಾಟ್​ ಕೊಹ್ಲಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಐಪಿಎಲ್​ ತನ್ನ ಹೇಳಿಕೆಯಲ್ಲಿ ತಿಳಿಸಿದೆ.         

short by Prajwal / more at Newspoint

Comments