Skip to main content


ರ್‍ಯಾಪಿಡ್‌ ಫೈರ್‌ ಪಿಸ್ತೂಲ್‌ನಲ್ಲಿ ಚಿನ್ನಗೆದ್ದು ದಾಖಲೆ ಬರೆದ 15ರ ಪೋರ ಅನೀಶ್‌ ಬಾನಾವಾಲ

ಚಿನ್ನ ಪದಕ ಗಳಿಕೆ ಸಾಧನೆಯಲ್ಲಿ ಮುನ್ನಡೆಯುತ್ತಿರುವ ಭಾರತೀಯ ಕೀಡಾಪಟುಗಳು ಶುಕ್ರವಾರ ಕಾಮನ್‌ವೆಲ್ತ್‌ ಕ್ರೀಡಾಕೂಟದ ಕುಸ್ತಿಯಲ್ಲಿ ಹಾಗೂ ಶೂಟಿಂಗ್‌ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದಾರೆ. ಪುರುಷರ 25 ಮೀಟರ್ಸ್‌ ರ್‍ಯಾಪಿಡ್‌ ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ ಅನೀಶ್‌ ಬಾನಾವಾಲ ಚಿನ್ನಗೆದ್ದಿದ್ದಾರೆ. 15 ವರ್ಷ ವಯಸ್ಸಿನ ಅನೀಶ್‌ ಬಾನಾವಾಲ ಈ ಸಾಧನೆ ತೋರಿದ್ದು, ಕಿರಿಯ ವಯಸ್ಸಿನಲ್ಲಿಯೇ ಚಿನ್ನ ಗೆದ್ದಿರುವುದು ಇದೊಂದು ಐತಿಹಾಸಿಕ ದಾಖಲೆಯಾಗಿದೆ. ಅನೀಶ್‌ ಪಾಲಿಗೆ ಇದು ಮೊದಲನೇ ಕಾಮನ್‌ವೆಲ್ತ್‌ ಕ್ರೀಡಾಕೂಟ ಹಾಗೂ ಈ ಕೂಡದ ಮೊದಲ ಪದಕ. ಇಂದು ನಡೆದ ಫೈನಲ್‌ನಲ್ಲಿ ಅನೀಶ್‌ 30 ಅಂಕ ಕಲೆಹಾಕಿ ತಮ್ಮ ಹೆಸರಿನಲ್ಲಿ ಕೂಟ ದಾಖಲೆ ನಿರ್ಮಿಸಿಕೊಂಡರು.  
            
short by Prajwal / read more at Prajavani