Skip to main content


ಮೋದಿ ಅವರ 15 ಲಕ್ಷ ರೂ. ಭರವಸೆ: ಉತ್ತರಿಸದ ಪಿಎಂಒ

ಪ್ರಧಾನಿ ನರೇಂದ್ರ ಮೋದಿ ಅವರು ಜನರ ಬ್ಯಾಂಕ್‌ ಖಾತೆಗಳಿಗೆ ತಲಾ 15 ಲಕ್ಷ ರೂ. ಜಮೆ ಮಾಡುವುದಾಗಿ ಭರವಸೆ ನೀಡಿದ್ದರು ಎನ್ನಲಾದ ಸಂಗತಿ ಬಗ್ಗೆ ಪ್ರತಿಕ್ರಿಯಿಸಲು ಪ್ರಧಾನಿ ಕಾರ್ಯಾಲಯ(ಪಿಎಂಒ) ನಿರಾಕರಿಸಿದೆ. ''ಈ ವಿಷಯವು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ಈ ಸಂಬಂಧಿ ಪ್ರಶ್ನೆಗಳಿಗೆ ಉತ್ತರಿಸಲಾಗದು,'' ಎಂದು ಕೇಂದ್ರೀಯ ಮಾಹಿತಿ ಆಯೋಗಕ್ಕೆ ಪಿಎಂಒ ಹೇಳಿದೆ. 2014ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ, ವಿದೇಶಗಳಲ್ಲಿನ ಕಾಳಧನವನ್ನು ಭಾರತಕ್ಕೆ ತರುವುದಾಗಿ ಮೋದಿ ಹೇಳಿದ್ದರು. ಈ ಸಂಬಂಧ ಮಾಹಿತಿ ಹಕ್ಕಿನ(ಆರ್‌ಟಿಐ) ಅನ್ವಯ ಮೋಹನ್‌ ಕುಮಾರ್‌ ಅವರು ಅರ್ಜಿ ಸಲ್ಲಿಸಿದ್ದರು. ''ಭರವಸೆ ನೀಡಿದಂತೆ ಪ್ರಧಾನಿಯು ಯಾವಾಗ ಜನರ ಖಾತೆಗೆ 15 ಲಕ್ಷ ರೂ. ಜಮೆ ಮಾಡುತ್ತಾರೆ?'' ಎಂದು ಪ್ರಶ್ನಿಸಿದ್ದರು. ಆದರೆ, ಅವರಿಗೆ ಸಮರ್ಪಕ ಉತ್ತರ ಸಿಕ್ಕಿರಲಿಲ್ಲ. ಮಾಹಿತಿ ಆಯೋಗಕ್ಕೆ ಈ ಬಗ್ಗೆ ತಕರಾರು ಸಲ್ಲಿಸಿದ್ದರು. ವಿಚಾರಣೆ ಸಂದರ್ಭದಲ್ಲಿ, ''ಅರ್ಜಿ ಸಂಬಂಧ ನನಗೆ ಪಿಎಂಒ ಮತ್ತು ಆರ್‌ಬಿಐ ಸೂಕ್ತ ಮಾಹಿತಿ ನೀಡಿಲ್ಲ,'' ಎಂದು ಮಾಹಿತಿ ಹಕ್ಕು ಆಯೋಗದ ಮುಖ್ಯ ಆಯುಕ್ತ ಆರ್‌.ಕೆ.ಮಾಥುರ್‌ ಬಳಿ ಶರ್ಮಾ ದೂರಿದ್ದರು. ''ಶರ್ಮಾ ಕೇಳಿರುವ ವಿಷಯಗಳು ಮಾಹಿತಿ ಹಕ್ಕು ಕಾಯ್ದೆಯ ಅನ್ವಯ 'ಮಾಹಿತಿ' ವ್ಯಾಪ್ತಿಗೆ ಬರುವುದಿಲ್ಲ ಎಂದು ಪಿಎಂಒ ಹೇಳಿದೆ. ಶರ್ಮಾ ಅರ್ಜಿ ಸಂಬಂಧ ಪಿಎಂಒ ಮತ್ತು ಆರ್‌ಬಿಐ ಕೈಗೊಂಡಿರುವ ಕ್ರಮಗಳು ತೃಪ್ತಿಕರವಾಗಿವೆ'' ಎಂದು ಮಾಥುರ್‌ ವಿವರಣೆ ನೀಡಿದ್ದಾರೆ.        

short by Pawan / read more at Vijayakarnataka

Comments