Skip to main content


1.5 ಲಕ್ಷ ರೂ. ಬಂಡವಾಳದಲ್ಲಿ ಉದ್ಯಮ ಶುರು ಮಾಡಿ ದಿನಕ್ಕೆ ಸಾವಿರ ರೂ. ಗಳಿಸಿ

ಈ ಉದ್ಯಮದಲ್ಲಿ ನೀವು ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಬಹುದು. ದಿನಕ್ಕೆ 1000 ರೂಪಾಯಿ ವಹಿವಾಟಾದ್ರೆ ಅದ್ರಲ್ಲಿ 500 ರೂಪಾಯಿ ಲಾಭವಾಗುತ್ತದೆ. ಈ ಉದ್ಯಮವನ್ನು ಒಂದೇ ಕಡೆ ಕುಳಿತು ಶುರು ಮಾಡಬಹುದು. ಶೇಕಡಾ 50ರಷ್ಟು ಆದಾಯವಿರುವ ಈ ಉದ್ಯಮ ಮತ್ಯಾವದೂ ಅಲ್ದ ಸೋಡಾ ಮಾರಾಟ. ಸೋಡಾ ಯಂತ್ರ ಮೂರು ರೀತಿಯಲ್ಲಿರುತ್ತದೆ. 6 + 2, 8+2, 10+2. ಅಂದ್ರೆ 6 + 2 ಯಂತ್ರದಲ್ಲಿ 6 ಸೋಡಾ ಯಂತ್ರವಾಗಿದ್ದರೆ 2 ಜ್ಯೂಸ್ ಯಂತ್ರವಾಗಿರುತ್ತದೆ. 8+2ನಲ್ಲಿ 8 ಸೋಡಾ ಫ್ಲೇವರ್ ಆಗಿದ್ದರೆ 2 ಜ್ಯೂಸ್. 10+2ನಲ್ಲಿ ಕೂಡ 10 ಸೋಡಾ ಆಗಿದ್ದರೆ 2 ಜ್ಯೂಸ್ ಆಗಿರುತ್ತದೆ. ನಿಮ್ಮ ಬಳಿ ಎಷ್ಟು ಜಾಗವಿದೆ ಎಂಬುದನ್ನು ನೋಡಿ ನೀವು ಯಾವ ಮಶಿನ್ ಸೂಕ್ತ ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು. 50 ಸಾವಿರದಿಂದ 2 ಲಕ್ಷದವರೆಗಿನ ಮಿಶನ್ ಮಾರುಕಟ್ಟೆಯಲ್ಲಿದೆ. ಗ್ಯಾರಂಟಿ ಹಾಗೂ ವಾರಂಟಿ ನೋಡಿ ಮಶಿನ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.  ಯಂತ್ರ, ನೀರಿನ ಟ್ಯಾಂಕ್, ಸೋಡಾ, ಅನಿಲ ಸಿಲಿಂಡರ್, ಫ್ಲೇವರ್, ಸಕ್ಕರೆ, ಕಾಗದದ ಕಪ್ ಸೇರಿದಂತೆ ಕೆಲ ವಸ್ತುಗಳ ಅಗತ್ಯತೆಯಿರುತ್ತದೆ.          

short by Pawan / more at Kannadadunia

Comments