Skip to main content


ರಾತ್ರೋರಾತ್ರಿ ಬಂತು 1 ಕಾಲ್ – 'ನಟ ಸಾರ್ವಭೌಮ’ ನಿಗೆ ಡಿಂಪಲ್ ಕ್ವೀನ್ ಗ್ರೀನ್ ಸಿಗ್ನಲ್!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾಡುತ್ತಿರುವ `ನಟ ಸಾರ್ವಭೌಮ’ ಸಿನಿಮಾದ ನಾಯಕಿ ಪಾತ್ರಕ್ಕೆ ಮಹಾರಾಷ್ಟ್ರದ ಹುಡುಗಿ ಪ್ರಿಯಾಂಕಾ ಜ್ವಾಲಕರ್ ಆಯ್ಕೆಯಾಗಿದ್ದರು. ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಪ್ರಿಯಾಂಕಾರನ್ನ ಚಿತ್ರತಂಡ ಕೈಬಿಟ್ಟಿತ್ತು. ಆದರೆ ಈಗ `ನಟ ಸಾರ್ವಭೌಮ’ ಸಿನಿಮಾಗೆ ರಚಿತಾ ರಾಮ್ ಆಯ್ಕೆಯಾಗಿದ್ದಾರೆ. `ನಟ ಸಾರ್ವಭೌಮ’ ಸಿನಿಮಾದ ಮುಹೂರ್ತ ಮುಗಿದ ಮೇಲೆ ಮಾರನೇ ದಿನ ರಾತ್ರೋರಾತ್ರಿ ಬಂದ ಒಂದೇ ಒಂದು ಫೋನ್ ಕಾಲ್ ಸಿನಿಮಾಗಾಗಿ ರಚಿತಾ ರಾಮ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ರಾತ್ರಿ ಸುಮಾರು 10.30 ಕ್ಕೆ ರಾಕ್‍ಲೈನ್ ವೆಂಕಟೇಶ್ ಅವರು ರಚಿತಾ ರಾಮ್ ಗೆ ಫೋನ್ ಮಾಡಿ ಚಿತ್ರದ ಆಫರ್ ಕೊಟ್ಟಿದ್ದಾರೆ. ನಂತರ ರಚಿತಾ ರಾಮ್ ಕೂಡಲೇ ಒಪ್ಪಿಗೆ ಸೂಚಿಸಿದ್ದಾರೆ. ಈಗ ಸದ್ಯಕ್ಕೆ ನೀನಾಸಂ ಸತೀಸ್ ಅಭಿನಯದ `ಅಯೋಗ್ಯ’, `ಉಪ್ಪಿ ರುಪಿ’ ಮತ್ತು `ಸೀತಾ ರಾಮ ಕಲ್ಯಾಣ’ ಸಿನಿಮಾಗಳ ಜೊತೆಗೆ `ನಟ ಸಾರ್ವಭೌಮ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.       

short by Pawan / more at Public Tv

Comments