Skip to main content


ಟಿ20 ಬಳಿಕ 100 ಎಸೆತಗಳ ಕ್ರಿಕೆಟ್‌!

ಈಗ ಕ್ರಿಕೆಟ್‌ ಜಗತ್ತಿನಲ್ಲಿ ಟಿ20 ಕ್ರಿಕೆಟ್‌ ಹವಾ ಚಾಲ್ತಿಯಲ್ಲಿದೆ. ಇದೇ ಹೊತ್ತಿನಲ್ಲಿ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ಒಂದು ಕ್ರಾಂತಿಕಾರಕ ಘೋಷಣೆ ಮಾಡಿದೆ. ಟಿ20ಗಿಂತ ಕ್ರಿಕೆಟನ್ನು ಕಿರಿದು ಮಾಡಿ 100 ಎಸೆತಗಳ ಕ್ರಿಕೆಟ್‌ ನಡೆಸುವುದಾಗಿ ಪ್ರಕಟಿಸಿದೆ. 2020ರಲ್ಲಿ ಇದರ ಮೊದಲ ಆವೃತ್ತಿ ನಡೆಯಲಿದೆ. ಇಲ್ಲಿನ ಪ್ರತಿ ಪಂದ್ಯದಲ್ಲಿ ತಂಡವೊಂದರ ಇನ್ನಿಂಗ್ಸ್‌ 100 ಎಸೆತಕ್ಕೆ ಮುಕ್ತಾಯವಾಗುತ್ತದೆ. ಅಂದರೆ ಪ್ರಸ್ತುತ ಟಿ20ಯಲ್ಲಿ 120 ಎಸೆತಗಳಿದ್ದರೆ, ಇಲ್ಲಿ ಬರೀ 100 ಎಸೆತವಿರುತ್ತದೆ. ಒಂದು ಇನ್ನಿಂಗ್ಸ್‌ನಲ್ಲಿ ಎಂದಿನಂತೆ ತಲಾ ಆರು ಎಸೆತಗಳಿರುವ 15 ಓವರ್‌ ಇರುತ್ತದೆ. ವಿಶೇಷವೆಂದರೆ ಇನ್ನಿಂಗ್ಸ್‌ವೊಂದರಲ್ಲಿ ಒಂದು ವೈಲ್ಡ್‌ ಕಾರ್ಡ್‌ ಓವರ್‌ ಇರುತ್ತದೆ. ಇಲ್ಲಿ 10 ಎಸೆತಗಳನ್ನು ಮಾಡಲಾಗುತ್ತದೆ. ಇದನ್ನು ತಂಡದ ನಾಯಕ ತನ್ನ ವಿವೇಚನೆಗನುಗುಣವಾಗಿ ಪಂದ್ಯದ ಯಾವ ಹಂತದಲ್ಲಾದರೂ ಬಳಸಬಹುದು.             

short by Prajwal / read more at Dailyhunt

Comments