Skip to main content


ವೆಸ್ಟ್‌ ಇಂಡೀಸ್‌ ವಿರುದ್ಧದ ಟ್ವೆಂಟಿ–20: ಪಾಕಿಸ್ತಾನ ‘ಕ್ಲೀನ್‌ ಸ್ವೀಪ್‌’ ಸಾಧನೆ

ಬಾಬರ್‌ ಆಜಮ್‌ (51; 40ಎ) ಹಾಗೂ ಆರಂಭಿಕ ಬ್ಯಾಟ್ಸ್‌ಮನ್‌ ಫಕ್ರ್ ಜಮಾನ್‌ ಅವರ ಬಿರುಸಿನ ಬ್ಯಾಟಿಂಗ್‌ (40; 17ಎ, 2 ಸಿಕ್ಸರ್‌, 6 ಬೌಂಡರಿ) ನೆರವಿನಿಂದ ಪಾಕಿಸ್ತಾನ ತಂಡವು ವೆಸ್ಟ್‌ ಇಂಡೀಸ್‌ ವಿರುದ್ಧದ ಮೂರನೇ ಟ್ವೆಂಟಿ–20 ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಗೆದ್ದಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಕ್ಲೀನ್‌ ಸ್ವೀಪ್‌ ಸಾಧನೆ ಮಾಡಿದೆ. ಮೊದಲಿಗೆ ಬ್ಯಾಟಿಂಗ್‌ ಮಾಡಿದ ವೆಸ್ಟ್‌ ಇಂಡೀಸ್‌, 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು ಎದುರಾಳಿ ತಂಡಕ್ಕೆ 153 ರನ್‌ಗಳ ಸವಾಲು ನೀಡಿತು. 43 ಎಸೆತಗಳಲ್ಲಿ 52 ರನ್‌ ಗಳಿಸಿದ ಆ್ಯಂಡ್ರ್ಯೂ ಫ್ಲೆಚರ್‌, ವೆಸ್ಟ್‌ ಇಂಡೀಸ್‌ ಪರ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎಂದೆನಿಸಿಕೊಂಡರು. ಗುರಿ ಬೆನ್ನಟ್ಟಿದ ಆತಿಥೇಯ ತಂಡವು, ಕೇವಲ 16.5 ಓವರ್‌ಗಳಲ್ಲಿ ಜಯ ತಲುಪಿತು.              

short by Prajwal / read more at Prajavani

Comments