Skip to main content


2016–17ರ ಲೆಕ್ಕಪತ್ರ: ಬಿಜೆಪಿ ಅತಿ ಶ್ರೀಮಂತ ಪಕ್ಷ

ದೇಶದ ಏಳು ರಾಷ್ಟ್ರೀಯ ಪಕ್ಷಗಳ 2016–17ನೇ ಸಾಲಿನ ವರಮಾನದ ವರದಿಯನ್ನು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್) ಬಿಡುಗಡೆ ಮಾಡಿದೆ. ಪಕ್ಷಗಳು ಸಲ್ಲಿಸಿರುವ ವಾರ್ಷಿಕ ಲೆಕ್ಕಪತ್ರದ ಆಧಾರದಲ್ಲಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಈ ಲೆಕ್ಕದ ಪ್ರಕಾರ ಬಿಜೆಪಿ ದೇಶದ ಅತ್ಯಂತ ಶ್ರೀಮಂತ ಪಕ್ಷವಾಗಿದ್ದರೆ ಸಿಪಿಐ ಅತ್ಯಂತ ಕಡಿಮೆ ವರಮಾನ ಪಡೆದ ಪಕ್ಷವಾಗಿದೆ. ಸಿಪಿಐನ ವರಮಾನ ₹2.08 ಕೋಟಿ. ಇದು ಏಳು ರಾಷ್ಟ್ರೀಯ ಪಕ್ಷಗಳ ಒಟ್ಟು ವರಮಾನದ ಶೇ 0.13 ಮಾತ್ರ.        

short by NP / read more at Prajavani

Comments