Skip to main content


ಐಪಿಎಲ್ 2018ಕ್ಕೆ ಚಾಲನೆ: ರಂಗು ತುಂಬಿದ ಬಿಟೌನ್ ಸ್ಟಾರ್‌ಗಳು

ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್ 2018 ಉದ್ಘಾಟನಾ ಸಮಾರಂಭಕ್ಕೆ ರಂಗು ತುಂಬಲು ಬಾಲಿವುಡ್ ಸ್ಟಾರ್‌ಗಳು ಆಗಮಿಸಿದ್ದಾರೆ. ಐಪಿಎಲ್ 11 ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಲಿವುಡ್ ಸ್ಟಾರ್‌ಗಳಾದ ಹೃತಿಕ್ ರೋಷನ್, ಪ್ರಭುದೇವಾ, ಜಾಕ್ವಿಲಿನ್ ಫರ್ನಾಂಡೀಸ್, ವರುಣ್ ಧವನ್, ತಮನ್ನಾ ಭಾಟಿಯಾ ಅವರುಗಳು ಕುಣಿದು ಕುಪ್ಪಳಿಸಲಿದ್ದಾರೆ. 90 ನಿಮಿಷ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ನಂತರ ಐಪಿಎಲ್‌ 2018 ರ ಮೊದಲ ಪಂದ್ಯ ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವೆ ನಡೆಯಲಿದೆ.

short by Pawan / read more at 60secondsnow