Skip to main content


ಐಪಿಎಲ್ 2018 : ಬೆಂಗಳೂರು ವಿರುದ್ಧ ಕೋಲ್ಕತಾಗೆ ಗೆಲುವು

ಇಲ್ಲಿನ ಈಡೆನ್ ಗಾರ್ಡನ್ಸ್ ಮೈದಾನದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2018) ನ 11ನೇ ಆವೃತ್ತಿಯ ಮೂರನೇ ಪಂದ್ಯ ನಡೆದಿದೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ದಿನೇಶ್ ಕಾರ್ತಿಕ್ ನಾಯಕತ್ವದ ಕೋಲ್ಕತಾ ನೈಟ್ ರೈಡರ್ಸ್ ನಡುವೆ ಸಮಬಲದ ಹೋರಾಟ ಕಂಡು ಬಂದರೂ ಕೆಕೆ ಆರ್ 4 ವಿಕೆಟ್ ಗಳ ಅಂತರದ ಜಯ ದಾಖಲಿಸಿದೆ. ಸುನೀಲ್ ಸ್ಫೋಟಕ ಬ್ಯಾಟಿಂಗ್ 19 ಎಸೆತಗಳಲ್ಲಿ 50ರನ್ (4 ಬೌಂಡರಿ, 5ಸಿಕ್ಸರ್),ನಿತೀಶ್ ರಾಣಾ 25 ಎಸೆತಗಳಲ್ಲಿ 34ರನ್ ಹಾಗೂ ನಾಯಕ ದಿನೇಶ್ ಕಾರ್ತಿಕ್ 29 ಎಸೆತಗಳಲ್ಲಿ 35ರನ್ ಗಳಿಸಿ ಅಜೇಯರಾಗಿ ಉಳಿದು ತಂಡಕ್ಕೆ ಜಯ ತಂದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ ಗಳಲ್ಲಿ 176/7 ಸ್ಕೋರ್ ಮಾಡಿತ್ತು.

short by Prajwal / read more at oneindia


Comments