Skip to main content


2019 ಏಕದಿನ ವಿಶ್ವಕಪ್: ಭಾರತಕ್ಕೆ ಮೊದಲ ಎದುರಾಳಿ ದ.ಆಫ್ರಿಕಾ, ಪಾಕ್ ವಿರುದ್ದ ಜೂನ್ 16ಕ್ಕೆ ಕಾದಾಟ

ಬಹುನಿರೀಕ್ಷಿತ 2019 ಐಸಿಸಿ ಕ್ರಿಕೆಟ್ ಏಕದಿನ ವಿಶ್ವಕಪ್‌ನಲ್ಲಿ ಜೂನ್ 5ರಂದು ನಡೆಯಲಿರುವ ಪಂದ್ಯದಲ್ಲಿ ಪ್ರಬಲ ದಕ್ಷಿಣ ಆಫ್ರಿಕಾ ಸವಾಲನ್ನು ಎದುರಿಸುವ ಮೂಲಕ ಭಾರತ ತನ್ನ ಮೊದಲ ಪಂದ್ಯವನ್ನು ಆಡಲಿದೆ.  ಆ ಮೂಲಕ ತನ್ನ ಅಭಿಯಾನವನ್ನು ಶುರು ಮಾಡಲಿದೆ. ಈ ನಡುವೆ ಪಂದ್ಯಾವಳಿಯಲ್ಲಿ ಪಾಕ್ ವಿರುದ್ದ ಜೂನ್ 16ರಂದು ಭಾರತ ಕಾದಾಡಲಿದೆ. ಈ ಹಿಂದೆ ಜೂನ್ 2 ದಿನಾಂಕ ನಿಗದಿಗೊಳಿಸಿದ್ದರೂ ಐಪಿಎಲ್ ಫೈನಲ್ ಬಳಿಕ ಅಂತರಾಷ್ಟ್ರೀಯ ಪಂದ್ಯಾಟಗಳ ನಡುವೆ 15 ದಿನಗಳ ಅಂತರ ಕಾಪಾಡಬೇಕು ಎಂಬ ಲೋಧಾ ಸಮಿತಿಯ ಶಿಫಾರಸಿನ ಮೆರೆಗೆ ದಿನಾಂಕದಲ್ಲಿ ಬದಲಾವಣೆ ತರಲಾಗಿದೆ ಎನ್ನಲಾಗಿದೆ. 2019ನೇ ಸಾಲಿನ ಐಪಿಎಲ್ ಪಂದ್ಯಾವಳಿ ಮಾರ್ಚ್ 29ರಿಂದ ಮೇ 19ರ ವರೆಗೆ ನಡೆಯಲಿದೆ.           

short by Prajwal / more at Newspoint

Comments