Skip to main content


ಸರಕಾರಿ ನೌಕರರಿಗೆ ಬಿಗ್ ಶಾಕ್: ಬಡ್ತಿ ವಿವಾದ 20 ಸಾವಿರ ನೌಕರರು ಆತಂತ್ರ

ರಾಜ್ಯದಲ್ಲಿ ಜಾರಿಯಲ್ಲಿರುವ ಚುನಾವಣಾ ನೀತಿ ಸಂಹಿತೆ ನ್ಯಾಯಾಲಯದ ಈ ಆದೇಶಕ್ಕೆ ಅನ್ವಯಿಸುವುದಿಲ್ಲ. ಯಾವ ಯಾವ ಇಲಾಖೆಗಳಲ್ಲಿ ಹಿಂಬಡ್ತಿ-ಮುಂಬಡ್ತಿ ಆದೇಶ ಹೊರಡಿಸಿಲ್ಲವೊ ಅಲ್ಲೆಲ್ಲ ಮೇ. 1 ರಿಂದ ಈ ಆದೇಶ ಪಾಲನೆಯಾಗಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಸುಪ್ರೀಂಕೋರ್ಟ್ ಆದೇಶ ಯಥಾವತ್ತಾಗಿ ಪಾಲನೆಯಾದರೆ ಅಂದಾಜು 15 ರಿಂದ 20 ಸಾವಿರ ಸರ್ಕಾರಿ ಅಧಿಕಾರಿ ಮತ್ತು ನೌಕರರಿಗೆ ಹಿಂಬಡ್ತಿ ಮುಂಬಡ್ತಿ ಆಗಲಿದೆ. ಮೀಸಲಾತಿ ಅನ್ವಯ ಬಡ್ತಿ ಪಡೆದಿದ್ದ ಎಸ್ಸಿ-ಎಸ್ಟಿ ನೌಕರರು ಹಿಂಬಡ್ತಿ ಹೊಂದಲಿದ್ದಾರೆ. ಆಯಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಜ್ಯೇಷ್ಠತಾ ಪಟ್ಟಿ ಪ್ರಕಾರ ಮುಂಬಡ್ತಿ  ಪಡೆಯಲಿದ್ದಾರೆ. ಈವರೆಗೆ ಉನ್ನತ ಸ್ಥಾನದಲ್ಲಿದ್ದವರು ಕೆಳಗಿನ ಸ್ಥಾನಕ್ಕೆ ಬಂದರೆ ಕೆಳ ಹುದ್ದೆಯಲ್ಲಿದ್ದವರು ಮೇಲಿನ ಹುದ್ದೆ ಅಲಂಕರಿಸಲಿದ್ದಾರೆ.       

short by Pawan / more at Kannada News Now

Comments