Skip to main content


ಕೇರಳದ ಚಾಲಕನಿಗೆ ₹ 21.21ಕೋಟಿ ದುಬೈ ಲಾಟರಿ

ಇಲ್ಲಿನ ಖಾಸಗಿ ಕಂಪನಿಯಲ್ಲಿ ಚಾಲಕರಾಗಿರುವ ಕೇರಳದ ಜಾನ್‌ ವರ್ಗೀಸ್‌ ಅವರು ಬಿಗ್‌ ಟಿಕೆಟ್‌ ರಾಫೆಲ್‌ ಲಾಟರಿಯಲ್ಲಿ  ₹21.20 ಕೋಟಿ ಗೆದ್ದುಕೊಂಡಿದ್ದಾರೆ. ವರ್ಗೀಸ್‌, 2016ರಿಂದ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ರಾಫೆಲ್‌ ಟಿಕೆಟ್‌ ಅನ್ನು ಸಾಮಾನ್ಯವಾಗಿ ಗೆಳೆಯರು ಒಟ್ಟಾಗಿ ಖರೀದಿಸುತ್ತಾರೆ. ಬಹುಮಾನದ ಮೊತ್ತವನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ವರ್ಗೀಸ್‌ ಕೂಡ ನಾಲ್ಕು ಮಂದಿ ಸ್ನೇಹಿತರೊಂದಿಗೆ ಈ ಹಣವನ್ನು ಹಂಚಿಕೊಳ್ಳಲಿದ್ದಾರೆ. ಕಳೆದ ಅಕ್ಟೋಬರ್‌ನಿಂದ ಅಬುಧಾಬಿಯಲ್ಲಿ ನಡೆದ ಮೆಗಾ ರಾಫೆಲ್‌ ಡ್ರಾನಲ್ಲಿ ವಿಜೇತರಾದ ಹತ್ತು ಜನರಲ್ಲಿ ಎಂಟು ಮಂದಿ ಭಾರತೀಯರೇ ಆಗಿದ್ದಾರೆ.   
     
short by NP / read more at Prajavani