Skip to main content


ಚುನಾವಣಾಧಿಕಾರಿಗಳಿಂದ ೨.೧೯ ಕೋಟಿ ರೂ. ಜಪ್ತಿ!

ಬೆಂಗಳೂರಿನ ಹಲಸೂರು ಚೆಕ್ ಪೋಸ್ಟ್ ನಲ್ಲಿ ವಿವಿಧ ಬ್ಯಾಂಕ್ ಗಳ ಎ.ಟಿ.ಎಂ.ಗಳಿಗೆ ತುಂಬಿಸಲು ಕೊಂಡೊಯ್ಯುತ್ತಿದ್ದ 2.19 ಕೋಟಿ ರೂ. ಜಫ್ತಿ ಮಾಡಲಾಗಿದೆ. ಸೂಕ್ತವಾದ ದಾಖಲೆ ಇಲ್ಲದ ಕಾರಣಕ್ಕೆ ಹಣ ಜಫ್ತಿ ಮಾಡಲಾಗಿದ್ದು, ಐ.ಟಿ. ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬ್ಯಾಂಕ್ ಅಧಿಕಾರಿಗಳು ಕೂಡ ಆಗಮಿಸಿ ಬ್ಯಾಂಕ್ ಗೆ ಸೇರಿದ ಹಣವೆಂದು ಸ್ಪಷ್ಟಪಡಿಸಿದ್ದಾರೆ. ಹಣ ಸಾಗಿಸುವ ವಾಹನದ ಸಂಖ್ಯೆ ಮತ್ತು ದಾಖಲಾತಿಯಲ್ಲಿನ ವಾಹನದ ಸಂಖ್ಯೆಗೆ ವ್ಯತ್ಯಾಸವಿದ್ದ ಕಾರಣ ಸೂಕ್ತವಾದ ದಾಖಲೆ ಸಲ್ಲಿಸುವಂತೆ ಬ್ಯಾಂಕ್ ಸಿಬ್ಬಂದಿಗೆ ತಿಳಿಸಿ, ಹಣ ಜಫ್ತಿ ಮಾಡಲಾಗಿದೆ.

short by Shraman Jain / more at Kannada Dunia


Comments