Skip to main content


24ರ ಹರೆಯದ ಚಾರ್ಟೆರ್ಡ್ ಅಕೌಂಟೆಂಟ್ ಈಗ ಜೈನ ಮುನಿ!

ಮುಂಬೈ ಮೂಲದ ಶ್ರೀಮಂತ ಕುಟುಂಬದ 24ರ ಹರೆಯದ ಚಾರ್ಟೆರ್ಡ್ ಅಕೌಂಟೆಂಟ್ ವೃತ್ತಿ ಮಾಡುತ್ತಿದ್ದ ಯುವಕ ಇದೀಗ ಕೋಟ್ಯಂತರ ರೂಪಾಯಿ ಸಂಪತ್ತನ್ನು ತ್ಯಜಿಸಿ ಮೋಕ್ಷ ಪಡೆಯಲು ಜೈನ ಮುನಿಯಾಗಲು ನಿರ್ಧರಿಸಿದ್ದಾರೆ. ಮೋಕ್ಷೇಶ್ ಶೇಟ್ ಅವರ ಕುಟುಂಬ ಜೆಕೆ ಕಾರ್ಪೋರೇಶನ್ ಮೂಲಕ ವ್ಯವಹಾರ ನಡೆಸುತ್ತಿದೆ. ಮೋಕ್ಷೇಶ್ ವಜ್ರ, ಮೆಟಲ್ ಹಾಗೂ ಶುಗರ್ ಇಂಡಸ್ಟ್ರೀಸ್ ಬಗ್ಗೆ ಆಸಕ್ತಿ ಹೊಂದಿದ್ದರು. ಆದರೆ ಎಲ್ಲವನ್ನೂ ತ್ಯಜಿಸಿ ಇತ್ತೀಚೆಗೆ ಗಾಂಧೀನಗರ-ಅಹಮ್ಮದಾಬಾದ್ ರಸ್ತೆ ಸಮೀಪದ ತಪೋವನ್ ಸರ್ಕಲ್ ನಲ್ಲಿ ನಡೆದ ಸಮಾರಂಭದಲ್ಲಿ ಜೈನ ಮುನಿಯಾಗಿ ದೀಕ್ಷೆ ಪಡೆದಿದ್ದಾರೆ.     

short by NP / read more at Udayavani

Comments