Skip to main content


ಏ.27, 28ಕ್ಕೆ ಪ್ರಧಾನಿ ಮೋದಿ ಚೀನಾಕ್ಕೆ

ಪ್ರಧಾನಿ ನರೇಂದ್ರ ಮೋದಿ ಏ.27, 28ರಂದು ಚೀನಾ ಪ್ರವಾಸ ಕೈಗೊಳ್ಳಲಿದ್ದಾರೆ. ಅಲ್ಲಿನ ವುಹಾನ್‌ ನಗರದಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜತೆ ಅನೌಪಚಾರಿಕ ಮಾತುಕತೆ ನಡೆಸಲಿದ್ದಾರೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಜತೆಗಿನ ಮಾತುಕತೆ ಬಳಿಕ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಸುಷ್ಮಾ ಸ್ವರಾಜ್‌ ಈ ಮಾಹಿತಿ ನೀಡಿದ್ದಾರೆ. ಸಚಿವೆ ಸುಷ್ಮಾ ಸ್ವರಾಜ್‌ ಸೋಮವಾರದಿಂದ ಎರಡು ದಿನಗಳ ಕಾಲ ನಡೆಯಲಿರುವ ಶಾಂಘೈ ಸಹಕಾರ ಒಕ್ಕೂಟ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಮ್ಮೇಳನದಲ್ಲಿ ಭಾಗವಹಿಸಲು ಬೀಜಿಂಗ್‌ಗೆ ಬಂದಿದ್ದಾರೆ. ಪಿಎಂ ಮೋದಿ ಮತ್ತು ಅಧ್ಯಕ್ಷ ಜಿನ್‌ಪಿಂಗ್‌ ನಡುವಿನ ಸಭೆಯಲ್ಲಿ ಗಡಿ ತಂಟೆ, ಬಾಂಧವ್ಯ ವೃದ್ಧಿಗೆ ಬೇಕಾದ ಕ್ರಮಗಳು ಸೇರಿದಂತೆ ಹಲವು ಅಂಶಗಳು ಚರ್ಚೆಗೆ ಬರಲಿವೆ. 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿಯವರ ನಾಲ್ಕನೇ ಚೀನಾ ಪ್ರವಾಸ ಇದಾಗಲಿದೆ.    

short by Pawan / more at Udayavani

Comments