Skip to main content


"ಸ್ಟೂಡೆಂಟ್ ಆಫ್ ದಿ ಇಯರ್-2" ಚಿತ್ರಕ್ಕೆ ಬಂದ ಇಬ್ಬರು ಬಳುಕುವ ಬಳ್ಳಿಗಳು.!

2012 ರ ಸೂಪರ್ ಹಿಟ್ ಸಿನಿಮಾ 'ಸ್ಟೂಡೆಂಟ್ ಆಫ್ ದಿ ಇಯರ್' ಚಿತ್ರದ ಮೂಲಕ ಆಲಿಯಾ ಭಟ್, ವರುಣ್ ಧವನ್, ಸಿದ್ಥಾರ್ಥ್ ಮಲ್ಹೋತ್ರ ಎಂಬ ತ್ರಿವಳಿ ಕಲಾವಿದರು ಸೂಪರ್ ಸ್ಟಾರ್ ಆಗಿ ಬೆಳದು ನಿಂತರು. ಇದೀಗ, ಈ ಚಿತ್ರದ 'ಸ್ಟೂಡೆಂಟ್ ಆಫ್ ದಿ ಇಯರ್-2' ಚಿತ್ರದ ಫೋಸ್ಟರ್ ಬಿಡುಗಡೆಯಾಗಿದೆ. 'ಭಾಗಿ-2' ಚಿತ್ರದ ಮೂಲಕ ಅಬ್ಬರಿಸುತ್ತಿರುವ ಟೈಗರ್ ಶ್ರಾಫ್ ಈ ಚಿತ್ರದ ನಾಯಕರಾಗಿದ್ದು, ತಾರಾ ಸುತಾರಿಯಾ ಮತ್ತು ಅನನ್ಯ ಪಾಂಡೆ ಟೈಗರ್ ಶ್ರಾಫ್ ಗೆ ಜೋಡಿಯಾಗಿ ಅಭಿನಯಿಸಲಿದ್ದಾರೆ. ಈ ಇಬ್ಬರು ನಟಿಯರಿಗೂ ಇದು ಚೊಚ್ಚಲ ಸಿನಿಮಾ.    

short by Pawan / read more at 60secondsnow

Comments