Skip to main content


ಪತ್ನಿಯ ಶೀಲ ಶಂಕಿಸಿ 2 ತಿಂಗಳ ಮಗುವನ್ನೇ ಕೊಂದ ಅಪ್ರಾಪ್ತ

ರಾಷ್ಟ್ರ ರಾಜಧಾನಿಯ ಮಂಗೋಲ್‌ಪುರಿ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ನಡೆದ ಅತ್ಯಂತ ಅಮಾನುಷ ಮತ್ತು ಕಳವಳಕಾರಿ  ಘಟನೆಯೊಂದರಲ್ಲಿ ಅಪ್ರಾಪ್ತ ವಯಸ್ಕನೋರ್ವ ತನ್ನ  2 ತಿಂಗಳ ಮಗುವನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ. ತನ್ನ ಪತ್ನಿಯ ಅನೈತಿಕ ಸಂಬಂಧದಿಂದಾಗಿ ಈ ಮಗು ಹುಟ್ಟಿದೆ ಎಂದು ಪತ್ನಿ ಮನೆಯಲ್ಲಿ ಮಗುವನ್ನು ಬಿಟ್ಟು ಕೆಲಸ ಹುಡುಕಲೆಂದು ಹೊರೆಗೆ ತೆರಳಿದ ವೇಳೆ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾನೆ. ಪೊಲೀಸರಿಗೆ ದೂರು ನೀಡಿದ ಬಳಿಕ ಕೂಡಲೇ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರು ಅಪ್ರಾಪ್ತ ವಯಸ್ಕರಾಗಿದ್ದು 10 ತಿಂಗಳ ಹಿಂದೆ ವಿವಾಹವಾಗಿದ್ದರು ಎಂದು ತಿಳಿದು ಬಂದಿದೆ. 

short by Shraman Jain / more at Udayavani


Comments