Skip to main content


ಕಾಮನ್​ವೆಲ್ತ್​ ಗೇಮ್ಸ್​: ಭಾರತಕ್ಕೆ ಮತ್ತೆ 3 ಚಿನ್ನ, 2 ಬೆಳ್ಳಿ

ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾರತೀಯ ಸ್ಪರ್ಧಿಗಳು ಚಿನ್ನದ ಬೇಟೆಯನ್ನು ಮುಂದುವರೆಸಿದ್ದಾರೆ. ಕೂಟದ 10ನೇ ದಿನವಾದ ಶನಿವಾರ ಭಾರತೀಯ ಸ್ಪರ್ಧಿಗಳು ಮತ್ತೆ 3 ಚಿನ್ನ ಮತ್ತು 2 ಪದಕ ಜಯಿಸಿದ್ದಾರೆ. ಶನಿವಾರ ಬೆಳಗ್ಗೆ ಮೇರಿಕೋಮ್​ ಅವರು ಬಾಕ್ಸಿಂಗ್​ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಪದಕ ಬೇಟೆ ಆರಂಭಿಸಿದ್ದರು. ಆ ನಂತರ ಬಾಕ್ಸಿಂಗ್​ನಲ್ಲಿ 1, ಶೂಟಿಂಗ್​ನಲ್ಲಿ 1 ಮತ್ತು ಅಥ್ಲೆಟಿಕ್ಸ್​ನಲ್ಲಿ 1 ಚಿನ್ನವನ್ನು ಭಾರತೀಯ ಸ್ಪರ್ಧಿಗಳು ಜಯಿಸಿದ್ದಾರೆ. ಬಾಕ್ಸಿಂಗ್ನಲ್ಲಿಿ 52 ಕೆ.ಜಿ. ವಿಭಾಗದಲ್ಲಿ ಗೌರವ್​ ಸೋಲಂಕಿ ಅವರು ಉತ್ತರ ಐರ್ಲೆಂಡ್​ನ ಸ್ಪರ್ಧಿ ಬ್ರೆಂಡನ್​ ಇರ್ವಿನ್​ ವಿರುದ್ಧ 4-1 ಅಂತರದಿಂದ ಜಯ ಸಾಧಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಉಳಿದಂತೆ ಬಾಕ್ಸಿಂಗ್​ನ 49 ಕೆ.ಜಿ. ವಿಭಾಗದಲ್ಲಿ ಅಮಿತ್​ ಪಂಗಹಾಲ್​ ಮತ್ತು 60 ಕೆ.ಜಿ. ವಿಭಾಗದಲ್ಲಿ ಮನೀಷ್​ ಕೌಶಿಕ್​ ಅವರು ಫೈನಲ್​ನಲ್ಲಿ ಸೋಲನುಭವಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರು.                    

short by Prajwal / read more at Vijayavani

Comments