Skip to main content


3 ನಿಮಿಷ ಸಂಪರ್ಕ ಕಳೆದುಕೊಂಡಿದ್ದ ರಾಹುಲ್ ವಿಶೇಷ ವಿಮಾನ, ಪೈಲೆಟ್ ಗಳ ವಿರುದ್ಧ ದೂರು

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಇಂದು (ಗುರುವಾರ) ದಿಲ್ಲಿಯಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ ವಿಮಾನವು 3 ನಿಮಿಷಗಳ ಕಾಲ ರಾಡಾರ್ ಸಂಪರ್ಕ ಕಳೆದುಕೊಂಡಿದ್ದು ಆತಂಕ ಸೃಷ್ಟಿಸಿತ್ತು. ಈ ಕುರಿತು ಪೈಲೆಟ್ ಗಳ ವಿರುದ್ಧ ಡಿಜಿಪಿ ನೀಲಮಣಿ ಎನ್.ರಾಜು ಅವರಿಗೆ ದೂರು ಸಲ್ಲಿಸಲಾಗಿದೆ. ವಿಶೇಷ ವಿಮಾನ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ ಮತ್ತು ಅದರ ಲ್ಯಾಂಡಿಂಗ್ ಕೂಡ ಸಾಮಾನ್ಯ ರೀತಿಯಲ್ಲಿರಲಿಲ್ಲ. ಇದರಿಂದ ಪ್ರಯಾಣಿಕರು ಜೀವಭಯ ಎದುರಿಸುವಂತಾಗಿತ್ತು ಎಂದು ದೂರಿ ಕಾಂಗ್ರೆಸ್ ಪೊಲೀಸರಿಗೆ ದೂರು ನೀಡಿದೆ. ವಿಮಾನ ನಿಲ್ದಾಣದ ಅಧಿಕಾರಿಗಳು ಖಾಸಗಿ ವಿಮಾನದ ಪೈಲಟ್ ಮತ್ತು ಸಿಬ್ಬಂದಿಯನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.           

short by NP / more at E Sanje

Comments