Skip to main content


ನಿರಂತರ 4ನೇ ಬಾರಿಗೆ ಆರ್‌ಬಿಐ ಬಡ್ಡಿದರ ಬದಲಾವಣೆ ಇಲ್ಲ

2019ರ ಹಣಕಾಸು ವರ್ಷದ ಮೊದಲ ದ್ವೆ„ಮಾಸಿಕ ಹಣಕಾಸು ನೀತಿಯನ್ನು ಇಂದು ಪ್ರಕಟಿಸಿರುವ ಆರ್‌ಬಿಐ ನಿರಂತರ ನಾಲ್ಕನೇ ಬಾರಿಗೆ ತನ್ನ ಬಡ್ಡಿದರಗಳನ್ನು ಯಥಾವತ್ತಾಗಿ ಉಳಿಸಿಕೊಂಡಿದೆ. ಹಾಗಾಗಿ ಬ್ಯಾಂಕ್‌ ಸಾಲಗಾರರಿಗೆ ಯಾವುದೇ ರಿಲೀಫ್ ಸಿಕ್ಕಿಲ್ಲ.ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು ರಿಪೋ ದರವನ್ನು ಈಗಿನ ಶೇ.6ರಲ್ಲೂ, ರಿವರ್ಸ್‌ ರಿಪೋ ದರವನ್ನು  ಈಗಿನ ಶೇ.5.75ರಲ್ಲೂ  ಯಥಾವತ್‌ ಉಳಿಸಿಕೊಳ್ಳಲು ನಿರ್ಧರಿಸಿತು.  ದೇಶದ ಆರ್ಥಿಕತೆಯು ನಿಧಾನಗತಿಯಲ್ಲಿ ಸಾಗುತ್ತಿರುವುದನ್ನು ಪರಿಗಣಿಸಿ ಅಗತ್ಯ ಬೆಂಬಲ ನೀಡುವ ನಿಟ್ಟಿನಲ್ಲಿ ಬಡ್ಡಿ ದರಗಳನ್ನು ಯಥಾವತ್‌ ಉಳಿಸಿಕೊಳ್ಳಲು ನಿರ್ಧರಿಸಲಾಯಿತು ಎಂದು ಸಮಿತಿ ಹೇಳಿದೆ.          

short by NP / read more at Udayavani    

Comments