Skip to main content


ಮಾರುಕಟ್ಟೆಗೆ ಮತ್ತೊಂದು ಹೊಸ ಆಫರ್: ರೂ.49ಕ್ಕೆ 3GB ಡೇಟಾ ಕೊಟ್ಟ ಏರ್ ಟೆಲ್..!

ಏರ್ ಟೆಲ್ ತನ್ನ ಬಳಕೆದಾರರಿಗೆ ಹೊಸ ಪ್ರೀಪೇಯ್ಡ್ ಪ್ಲಾನ್ ವೊಂದನ್ನು ಘೋಷಣೆ ಮಾಡಿದೆ. ರೂ.49ರ ಪ್ಲಾನ್ ಲಾಂಚ್ ಮಾಡಿದ್ದು, 3GB 3G/4G ಡೇಟಾವನ್ನು ಒಂದು ದಿನ ವ್ಯಾಲಿಡಿಟಿಗೆ ನೀಡಲಿದೆ ಎನ್ನಲಾಗಿದೆ. ಅಲ್ಲದೇ ಈ ಪ್ಲಾನ್ ಕೆಲವು ಆಯ್ದ ಏರ್ ಟೆಲ್ ಬಳಕೆದಾರರಿಗೆ ಮಾತ್ರವೇ ದೊರೆಯಲಿದೆ ಎನ್ನಲಾಗಿದೆ. ಈ ಹಿಂದೆ ಇದೇ ಬೆಲೆಗೆ ಒಂದು GB ಡೇಟಾವನ್ನು ನೀಡುತಿತ್ತು ಎನ್ನಲಾಗಿದೆ. ಈ ಪ್ಲಾನ್ ಅನ್ನು ಪಡೆಯುವ ಸಲುವಾಗಿ ಏರ್ ಟೆಲ್ ಬಳಕೆದಾರರು ಮೈ ಏರ್ ಟೆಲ್ ಆಪ್ ಅನ್ನು ಹಾಕಿಕೊಳ್ಳಬೆಕಾಗಿದೆ. ಅಲ್ಲದೇ ವೆಬ್ ಸೈಟಿನ ಮೂಲಕವು ಪಡೆದುಕೊಳ್ಳಬಹುದಾಗಿದೆ. ಇದು ಡೇಟಾ ವಿಭಾಗದಲ್ಲಿ ಕಾಣಿಸಿಕೊಂಡ ಆಯ್ಕೆಯಾಗಿದೆ. ಎಲ್ಲಾ ಬಳಕೆದಾರರಿಗೂ ಲಭ್ಯವಿಲ್ಲ ಎನ್ನಲಾಗಿದೆ.

short by Sp / more at DailyHunt

Comments