Skip to main content


ಧೂಮ್ 4ಗೆ ಕಿಂಗ್ ಖಾನ್ ಆಗಮನ?

ಆದಿತ್ಯ ‘ಧೂಮ್ 4’ ಚಿತ್ರದ ನಿರ್ವಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಶಾರುಖ್ ನಟಿಸಲಿದ್ದಾರೆ ಎಂಬ ವಿಚಾರ ಕೇಳಿಬರುತ್ತಿದೆ. ‘ಧೂಮ್ ಸರಣಿಯಲ್ಲಿ ಇದುವರೆಗೂ ಜಾನ್ ಅಬ್ರಾಹಂ, ಹೃತಿಕ್ ರೋಷನ್, ಆಮೀರ್ ಖಾನ್ ನಟಿಸಿದ್ದಾರೆ. ಇದೀಗ ನಾಲ್ಕನೇ ಸರಣಿಗೆ ಸಲ್ಮಾನ್ ಖಾನ್ ಬಣ್ಣ ಹಚ್ಚಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. ಸದ್ಯದ ಬೆಳವಣಿಗೆಯಲ್ಲಿ ಶಾರುಖ್ ಹೆಸರು ಚಾಲ್ತಿಯಲ್ಲಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಶಾರುಖ್ ಖಾನ್ ಸದ್ಯ ‘ಜೀರೋ’ ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ನಂತರ ಫರ್ಹಾನ್ ಅಕ್ತರ್ ನಿರ್ದೇಶನದ ‘ಡಾನ್ 3’ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಇದೆಯಾದರೂ ಅಧಿಕೃತವಾಗಿಲ್ಲ.

short by: Sp / read more at Vijayavani

Comments