Skip to main content


ಗ್ರಾಚ್ಯುಯಿಟಿ ಕನಿಷ್ಠ ಸೇವಾವಧಿ 5ರಿಂದ 3ವರ್ಷಕ್ಕೆ ಇಳಿಕೆ ಸಂಭವ

ಗ್ರಾಚ್ಯುಯಿಟಿ ಅರ್ಹತೆಯ ಕನಿಷ್ಠ ಸೇವಾವಧಿಯನ್ನು ಈಗಿನ ಐದು ವರ್ಷಗಳಿಂದ ಮೂರು ವರ್ಷಕ್ಕೆ ಇಳಿಸಬೇಕೆಂಬ ಪ್ರಸ್ತಾವವನ್ನು ಸರಕಾರ ಸ್ವೀಕರಿಸುವ ಸಾಧ್ಯತೆಗಳಿದ್ದು ಇದರಿಂದ ಔಪಚಾರಿಕ ಉದ್ಯೋಗ ವಲಯದ ಲಕ್ಷಾಂತರ ಮಂದಿ ನೌಕರರಿಗೆ ಪ್ರಯೋಜನವಾಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 1972ರ ಗ್ರಾಚ್ಯುಯಿಟಿ ಪಾವತಿ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ಗ್ರಾಚ್ಯುಯಿಟಿ ಅರ್ಹತೆಯ ಕನಿಷ್ಠ ಸೇವಾವಧಿಯನ್ನು ಐದರಿಂದ ಮೂರು ವರ್ಷಕ್ಕೆ ಇಳಿಸಲು ಉದ್ದೇಶಿಸಲಾಗಿದೆ.      

short by NP / read more at Udayavani

Comments