Skip to main content


5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ನ್ಯೂಸ್ ಆಂಕರ್!

ನ್ಯೂಸ್ ನಿರೂಪಕಿ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಹೈದರಾಬಾದ್ ನ ಮೂಸಪೇಟ್‍ನಲ್ಲಿ ನಡೆದಿದೆ. ರಾಧಿಕಾ ರೆಡ್ಡಿ(36) ಆತ್ಮಹತ್ಯೆ ಮಾಡಿಕೊಂಡ ನಿರೂಪಕಿ. 6 ತಿಂಗಳ ಹಿಂದೆ ರಾಧಿಕಾ ಪತಿಯಿಂದ ವಿಚ್ಚೇಧನೆ ಪಡೆದಿದ್ದರು. ವಿಚ್ಛೇಧನದ ಬಳಿಕ ರಾಧಿಕಾ ತನ್ನ 14 ವರ್ಷದ ಬುದ್ಧಿಮಾಂದ್ಯ ಮಗನನ್ನು ತವರು ಮನೆಯಲ್ಲಿ ಬಿಟ್ಟು ಬಂದಿದ್ದರು. ಕೆಲಸದ ನಿಮಿತ್ತ ರಾಧಿಕಾ ಏಕಾಂಗಿಯಾಗಿ ಹೈದರಾಬಾದ್ ನಲ್ಲಿ ಉಳಿದುಕೊಂಡಿದ್ದರು. ವಿಚ್ಛೇಧನದ ಬಳಿಕ ರಾಧಿಕಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಅಂತಾ ಪೊಲೀಸರು ತಿಳಿಸಿದ್ದಾರೆ. ಸದ್ಯ ಅಲ್ಲಿನ ಸ್ಥಳೀಯ ಪೊಲೀಸರು ಈ ಕೇಸನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
short by Shraman Jain / read more at Public TV