Skip to main content


ಕುಮಾರಸ್ವಾಮಿ ಕನಸು ಕಾಣಲಿ ತಪ್ಪೇನಿಲ್ಲ, ಹಾಕಿರೋದು ಮಾತ್ರ 50 ರಿಂದ 60 ಸೀಟ್-ಡಿಕೆಶಿ ವ್ಯಂಗ್ಯ

ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಕನಸು ಕಾಣೋದರಲ್ಲಿ ತಪ್ಪೇನಿಲ್ಲ. ಆದ್ರೆ ಚುನಾವಣೆ ಹಾಕಿರೋದು 50 ರಿಂದ 60 ಸೀಟ್ ಮಾತ್ರ ಅಂತಾ ಇಂಧನ ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯ ಮಾಡಿದ್ದಾರೆ.

ಹಾಸನ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ 50 ರಿಂದ 60 ಸ್ವಂತ ಅಭ್ಯರ್ಥಿಗಳನ್ನು ಮಾತ್ರ ಕಣ್ಕಕೀಳಿಸಿದೆ. ಇನ್ನು ಉಳಿದಂತೆ ಕಾಂಗ್ರೆಸ್ ಹಾಗು ಬಿಜೆಪಿ ಟಿಕೆಟ್ ವಂಚಿತ ನಾಯಕರಿಗೆ ಜೆಡಿಎಸ್ ಟಿಕೆಟ್ ನೀಡಿದೆ. ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿ ಹಾಕಬೇಕೆಂದು ಹಾಕಿದೆ. ಮಾತಿಗೋಸ್ಕರ ನಾನು ರೈತನ ಮಗ, ಮಣ್ಣಿನ ಮಗ ಅಂತಾ ಹೇಳಿ ಕೊಳ್ಳಬಾರದು. ರಾಜ್ಯದ ರೈತರಿಗಾಗಿ ಕೆಲಸ ಮಾಡಬೇಕು. ಕಳೆದ 5 ವರ್ಷಗಳಲ್ಲಿ ಕಾಂಗ್ರೆಸ್ ಹಲವು ರೈತಪರ ಯೋಜನೆಗಳನ್ನು ಜಾರಿಗೆ ತಂದಿದೆ ಅಂತಾ ಹೇಳಿದ್ರು.              

short by NP / read more at Public TV

Comments