Skip to main content


500 ರೂಪಾಯಿ ಹಿಡಿದು ಮುಂಬೈಗೆ ಬಂದ ಈ ಬೊಂಬೆ ಇಂದು ಬಾಲಿವುಡ್ ಬಣ್ಣದ ಚಿಟ್ಟೆ!

''ಓದು ಬಿಟ್ಟು ಮುಂಬೈಗೆ ಬಂದವಳು ನಾನು. ಕಾಲೇಜಿಗೆ ಹೋಗುವ ಹುಡುಗಿಗೆ ಮುಂಬೈನಲ್ಲಿನ ಜೀವನ ಅಷ್ಟು ಸುಲಭ ಆಗಿರಲಿಲ್ಲ. ಕುಟುಂಬದಿಂದ ನಾನು ಹಣ ಸಹಾಯ ಪಡೆಯಲಿಲ್ಲ. ಮುಂಬೈಗೆ ಬಂದು ಇಳಿದಾಗ ನನ್ನ ಬಳಿ ಇದ್ದದ್ದು ಕೇವಲ 500 ರೂಪಾಯಿ'' ಎಂದು ಸಂದರ್ಶನವೊಂದರಲ್ಲಿ ದಿಶಾ ಪಟಾನಿ ಹೇಳಿದ್ದಾರೆ. ''ಟಿವಿ ಕಮರ್ಶಿಯಲ್ ಗಾಗಿ ಆಡಿಷನ್ ನಡೆಯುತ್ತಿದೆ ಅಂತ ಗೊತ್ತಾದಾಗ ತಪ್ಪದೆ ಭಾಗಿಯಾಗುತ್ತಿದೆ. ಕೆಲಸದಿಂದ ಬರುವ ಸಂಬಳದಿಂದ ನಾನು ಜೀವನ ನಡೆಸಬೇಕಾಗಿತ್ತು. ಕೆಲಸ ಸಿಕ್ಕಿಲ್ಲ, ಸಂಬಳ ಬರಲಿಲ್ಲ ಅಂದ್ರೆ ಬಾಡಿಗೆ ಹೇಗೆ ಕಟ್ಟೋದು ಅನ್ನೋದೇ ದೊಡ್ಡ ಚಿಂತೆ ಆಗ್ತಿತ್ತು'' ಅಂತ ತಮ್ಮ ಕಷ್ಟದ ದಿನಗಳ ಬಗ್ಗೆ ದಿಶಾ ಪಟಾನಿ ಮೆಲುಕು ಹಾಕಿದ್ದಾರೆ. ಊರು ಬಿಟ್ಟು ಮುಂಬೈಗೆ ಬಂದ ದಿಶಾ ಪಟಾನಿ ಇಂದು ಬಾಲಿವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ. ದಿಶಾ ಪಟಾನಿ ನಾಯಕಿ ಆಗಿ ಟೈಗರ್ ಶ್ರಾಫ್ ಹೀರೋ ಆಗಿ ಕಾಣಿಸಿಕೊಂಡಿರುವ 'ಭಾಗಿ-2' ಚಿತ್ರ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿರುವುದರಿಂದ ದಿಶಾ ಪಟಾನಿ ಕೂಡ ಖುಷಿಯಾಗಿದ್ದಾರೆ.
short by Pawan / read more at Oneindia