Skip to main content


ಭಾರತದ 5.62 ಲಕ್ಷ ಫೇಸ್‌ಬುಕ್‌ ಬಳಕೆದಾರರ ಮಾಹಿತಿ ಕಳವು

ಬ್ರಿಟನ್‌ನ ಕೇಂಬ್ರಿಜ್‌ ಅನಲಿಟಿಕಾ (ಸಿ.ಎ.) ಕಂಪನಿಯು ಫೇಸ್‌ಬುಕ್‌ ಖಾತೆಗಳ ಮೂಲಕ ಮಾಡಿದ ಮಾಹಿತಿ ಕಳವಿನಿಂದಾಗಿ ಭಾರತದಲ್ಲಿ 5.62 ಲಕ್ಷ ಜನರಿಗೆ ತೊಂದರೆ ಆಗಿರಬಹುದು ಎಂದು ಫೇಸ್‌ಬುಕ್‌ ಕಂಪನಿ ಹೇಳಿದೆ.ಕೇಂಬ್ರಿಜ್‌ ಅನಲಿಟಿಕಾ ಕಂಪನಿಯ ಮಾಹಿತಿ ಕಳವು ಪ್ರಕರಣ ಬಹಿರಂಗವಾದ ಬಳಿಕ ಈ ಕಂಪನಿ ಮತ್ತು ಫೇಸ್‌ಬುಕ್‌ಗೆ ಭಾರತ ಸರ್ಕಾರವು ನೋಟಿಸ್‌ ನೀಡಿತ್ತು. ಭಾರತ, ಬ್ರೆಜಿಲ್‌, ಮೆಕ್ಸಿಕೊ, ಪಾಕಿಸ್ತಾನ, ಹಂಗರಿ ದೇಶಗಳಲ್ಲಿ ಈ ವರ್ಷ ಹಲವು ಪ್ರಮುಖ ಚುನಾವಣೆಗಳು ನಡೆಯಲಿವೆ. ಇದನ್ನು ಗಮನದಲ್ಲಿ ಇರಿಸಿಕೊಂಡೇ ಕೆಲಸ ಮಾಡಲಾಗುವುದು ಎಂದು ಜುಕರ್‌ಬರ್ಗ್‌ ಹೇಳಿದ್ದಾರೆ.     

short by NP / read more at Prajavani

Comments