Skip to main content


ಬ್ರೇಕಿಂಗ್! 5 ಬಿಲಿಯನ್ ವ್ಯೂಸ್ ದಾಖಲಿಸಿ ಇತಿಹಾಸ ನಿರ್ಮಿಸಿದ್ದ ಡೆಸ್ಪಾಸಿಟೋ ಹಾಡು ಹ್ಯಾಕ್!

ಲೂಯಿಸ್ ಫೋನ್ಸಿಯ ರೆಕಾರ್ಡ್ ಬ್ರೇಕಿಂಗ್ ಮ್ಯೂಸಿಕ್ ವೀಡಿಯೋ 'ಡೆಸ್ಪಾಸಿಟೋ' ವನ್ನು ಹ್ಯಾಕರ್ಸ್ ಗುಂಪೊಂದು YouTube ನಿಂದ ಅಳಿಸಿ ಹಾಕಿದೆ. ಹೌದು, 5 ಶತಕೋಟಿ ವೀಕ್ಷಣೆಗಳನ್ನು ತಲುಪಿದ ಮೊದಲ ವೀಡಿಯೋ ಆಗುವ ಮೂಲಕ ಇತಿಹಾಸವನ್ನು ರಚಿಸಿದ ಕೆಲವೇ ದಿನಗಳಲ್ಲಿ, ವೀಡಿಯೊವು Youtube ಸೈಟ್ನಿಂದ ಕಣ್ಮರೆಯಾಯಿತು. ವೀಡಿಯೋಗಾಗಿ ಒಂದು ಹುಡುಕಾಟ ಕೈಗೊಂಡಾಗ, ವೀಡಿಯೊ ಬದಲಾಗಿ ೫ ವ್ಯಕ್ತಿಗಳು ವಿಚಿತ್ರ ಮುಖವಾಡ ಧರಿಸಿ, ಸ್ಕ್ರೀನ್ ನತ್ತ ಬಂದೂಕು ಹಿಡಿದು ಬಳಕೆದಾರರನ್ನು ಸ್ವಾಗತಿಸುವ ಫೋಟೋವೊಂದು ಕಾಣಸಿಗುತ್ತಿದೆ, ಅರ್ಥಾತ್ ಹ್ಯಾಕರ್ಸ್ನಿಂದ YouTube ಅನ್ನು ರಾಜಿ ಮಾಡಿಕೊಳ್ಳಬಹುದೆಂದು ಸೂಚಿಸುತ್ತಿದೆ. ಪ್ರೋಸೆಕ್ಸ್ ಮತ್ತು ಕುರೊಯಿಶ್ ಎಂಬ ಹೆಸರಿನ ಹಾಕರ್ಸ್ ವೀಡಿಯೊಗಳ ಕೆಳಗೆ 'ಫ್ರೀ ಪ್ಯಾಲೇಸ್ಟೈನ್' ಬರೆದಕೊಂಡಿದ್ದಾರೆ. ಕೆಲವು ತುಣುಕುಗಳು ಲೈವ್ ಆಗಿಯೇ ಇದ್ದರೂ, ವೀವೋ ನೇರವಾಗಿ ಪೋಸ್ಟ್ ಮಾಡಿರುವ ಸೆರೆನಾ ಗೊಮೆಜ್, ಷಕೀರಾ, ಟೇಲರ್ ಸ್ವಿಫ್ಟ್ ಮತ್ತು ಡ್ರೇಕ್ ಸೇರಿದಂತೆ ಹಲವು ಕಲಾವಿದರ ವೀಡಿಯೋಗಳನ್ನು ಹ್ಯಾಕರ್ಸ್ಗಳು ತಮ್ಮ ವಶಪಡಿಸಿಕೊಂಡಿದ್ದಾರೆ.

Written By: Shraman Jain

Comments