Skip to main content


5ನೇ ವಯಸ್ಸಿನಲ್ಲಿಯೇ ಈ ನಟಿ ಮೇಲೆ ನಡೆದಿತ್ತಂತೆ ಲೈಂಗಿಕ ಕಿರುಕುಳ

ತಮಿಳು ನಟಿ ನಿವೇತಾ ಪೇತುರಾಜ್ ತಮ್ಮ ಜೀವನದಲ್ಲಾದ ಘಟನೆಯೊಂದನ್ನು ಎಲ್ಲರ ಮುಂದಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಾಕಿರುವ ನಟಿ ಬಾಲ್ಯದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿದ್ದೆ ಎಂದಿದ್ದಾರೆ. 5 ವರ್ಷದಲ್ಲಿರುವಾಗಲೇ ನನ್ನ ಮೇಲೆ ದುಷ್ಕೃತ್ಯ ನಡೆದಿತ್ತು ಎಂದು ನಟಿ ಹೇಳಿದ್ದಾಳೆ. ಈ ವಿಡಿಯೋ ನೋಡುತ್ತಿರುವ ಕೆಲ ಪುರುಷರು ಹಾಗೂ ಮಹಿಳೆಯರು ಕೂಡ ಲೈಂಗಿಕ ಕಿರುಕುಳಕ್ಕೊಳಗಾಗಿರಬಹುದು. ನಾನು ಕೂಡ 5 ನೇ ವರ್ಷದಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿದ್ದೆ. ಆಗ್ಲೇ ನಾನು ತಂದೆ-ತಾಯಿಗೆ ಹೇಳಬೇಕಿತ್ತು. ಆದ್ರೆ ನನಗೆ ಅದೇನು ಎಂಬುದೇ ತಿಳಿದಿರಲಿಲ್ಲ ಎಂದಿದ್ದಾರೆ. ಎಲ್ಲ ಪಾಲಕರು ಮಕ್ಕಳಿಗೆ ಗುಡ್ ಟಚ್ ಹಾಗೂ ಬ್ಯಾಡ್ ಟಚ್ ಬಗ್ಗೆ ಹೇಳಬೇಕು ಎಂದು ನಟಿ ಮನವಿ ಮಾಡಿದ್ದಾರೆ.

short by Pawan / read more at Kannadadunia

Comments