Skip to main content


ಮೇ 6ಕ್ಕೆ ನೀಟ್ ಪರೀಕ್ಷೆ

ನೀಟ್ ಪರೀಕ್ಷೆ ಬರೆಯಲು ನೀಡಲಾಗುವ ಹಾಲ್ ಟಿಕೆಟ್ ನೀಡುವಲ್ಲಿ ಸಿಬಿಎಸ್‌ಇ ವಿಳಂಬ ಮಾಡಿದೆ. ನಿಗದಿಯಂತೆ 2018ರ ನೀಟ್ ಪರೀಕ್ಷೆಯ ಹಾಲ್ ಟಿಕೆಟನ್ನು ಸಿಬಿಎಸ್‌ಇ ಎಪ್ರಿಲ್ ಎರಡನೇ ವಾರದಲ್ಲಿ ನೀಡಬೇಕಿತ್ತು. ಆದರೆ ಪದವಿಪೂರ್ವ ಮಟ್ಟದ ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆಯ ಹಾಲ್ ಟಿಕೆಟ್ ನೀಡುವ ದಿನಾಂಕವನ್ನು ಮಂಡಳಿಯು ಇನ್ನೂ ಘೋಷಿಸಿಲ್ಲ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) 2018ರ ಅಧಿಸೂಚನೆಯ ಪ್ರಕಾರ, ಮಂಡಳಿಯು ತನ್ನ ಜಾಲತಾಣ cbseneet.nic.in ನ ಮೂಲಕ ಹಾಲ್ ಟಿಕೆಟನ್ನು ಡೌನ್‌ಲೋಡ್ ಮಾಡಿಕೊಳ್ಳುವ ಸೌಲಭ್ಯವನ್ನು ಒದಗಿಸಲಿದೆ. ನೀಟ್ ಪರೀಕ್ಷೆಯು ಮೇ 6ರಂದು ನಡೆಯಲಿದ್ದು ಅಭ್ಯರ್ಥಿಗಳು ಹಾಲ್ ಟಿಕೆಟ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ನೀಡಲಾದ ಸೂಚನೆಗಳನ್ನು ಪಾಲಿಸುವ ಮೂಲಕ ಪ್ರವೇಶ ಪರೀಕ್ಷೆಯನ್ನು ಬರೆಯಬಹುದಾಗಿದೆ.   

short by Pawan / read more at Varthabharathi

Comments