Skip to main content


 7 ಕೋಟಿ ರೂ ಬೆಲೆಯ ನಕಲಿ ನೋಟುಗಳು ವಶ!

ಚುನಾವಣಾ ಪ್ರಚಾರ ಬಿರುಸಾಗಿರುವ ವೇಳೆ ಬೆಳಗಾವಿಯಲ್ಲಿ ಮತದಾರರಿಗೆ ಹಂಚಲು ಬಚ್ಚಿಡಲಾಗಿದ್ದ 7 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ಪೊಲೀಸರು ಬುಧವಾರ  ಜಪ್ತಿ ಮಾಡಿದ್ದು, ಈ ಸಂಬಂಧ ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ವಿಶ್ವೇಶ್ವರ ನಗರದ ಪಾಳು ಬಿದ್ದ ಲೋಕೋಪಯೋಗಿ ಇಲಾಖೆ ಕಟ್ಟಡದಲ್ಲಿ ಅಪಾರ ಪ್ರಮಾಣದ 500 ರೂಪಾಯಿ ಮತ್ತು 2000 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ಬಚ್ಚಿಡಲಾಗಿತ್ತು. ಖಚಿತ ಮಾಹಿತಿಯ ಮೇರೆಗೆ ಚುನಾವಣಾ ಸಿಬಂದಿ ಮತ್ತು ಪೊಲೀಸರು ಜಂಟಿ ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ.               

short by NP / read more at Udayavani

Comments