Skip to main content


ದೇವಸ್ಥಾನದಲ್ಲೇ 7 ವರ್ಷದ ಬಾಲಕಿಯ ಅತ್ಯಾಚಾರಗೈದ ಅರ್ಚಕ

ಕಥುವಾದಲ್ಲಿ ಬಾಲಕಿ ಮೇಲೆ  ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಬೆಳಕಿಗೆ ಬಂದ ಬೆನ್ನಲೇ ಅಜ್ಮೀರ್ ನಲ್ಲಿ ದೇವಸ್ಥಾನದ ಅರ್ಚಕನೊಬ್ಬ ಏಳರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ವರದಿಯಾಗಿದೆ. ಅಜ್ಮೀರ್ ನ ಹೊರವಲಯದ ಕಲ್ಯಾಣಿಪುರ ಬೆಟ್ಟದಲ್ಲಿರುವ ಕಲಿಚಾಟ್ ಹನುಮಾನ್ ದೇವಸ್ಥಾನದ ಅರ್ಚಕ 48ರ ಹರೆಯದ ಸ್ವಾಮಿ ಶಿವಾನಂದ ಅಲಿಯಾಸ್ ಬಲ್ವಂತ್ ಎಂಬಾತನು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಆರೋಪಿಸಲಾಗಿದೆ. ಬಾಲಕಿ ದೇವಸ್ಥಾನದ ಬಳಿ ನಿಂತಿದ್ದಾಗ ಆಕೆಯನ್ನು ಕರೆದೊಯ್ದ ಅರ್ಚಕ ಶಿವಾನಂದ ಕೊಣೆಯೊಂದರಲ್ಲಿ ಕೂಡಿಹಾಕಿ ಅತ್ಯಾಚಾರ ನಡೆಸಿ ಬಳಿಕ ಆಕೆಯನ್ನು ಅಲ್ಲಿ ಬಿಟ್ಟು ಪರಾರಿಯಾಗಿರುವುದಾಗಿ  ಆರೋಪಿಸಲಾಗಿದೆ.   

short by Pawan / more at Varthabharathi

Comments