Skip to main content


ಕಾಮನ್ವೆಲ್ತ್ ಕ್ರೀಡಾಕೂಟ: ಭಾರತಕ್ಕೆ 7ನೇ ಚಿನ್ನ, ಮಹಿಳಾ ಟೇಬಲ್ ಟೆನಿಸ್ ತಂಡಕ್ಕೆ ಪದಕದ ಗರಿ

2018ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಚಿನ್ನದ ಬೇಟೆಯನ್ನು ಮುಂದುವರೆಸಿದ್ದು, ಮಹಿಳಾ ಟೇಬಲ್ ಟೆನಿಸ್ ತಂಡ ಭಾನುವಾರ ಚಿನ್ನ ಗೆಲ್ಲುವ ಮೂಲಕ ದೇಶಕ್ಕೆ 7ನೇ ಸ್ವರ್ಣ ಪದಕ ತಂದುಕೊಟ್ಟಿದೆ. ಇಂದು ನಡೆದ ಟೇಬಲ್ ಟೆನಿಸ್ ಸ್ಪರ್ಧೆಯ ಫೈನಲ್ ಪಂದ್ಯದಲ್ಲಿ ಭಾರತದ ಮಹಿಳಾ ತಂಡ, ಸಿಂಗಾಪುರದ ವಿರುದ್ಧ 3-1 ಅಂತರದಿಂದ ಗೆಲುವು ಸಾಧಿಸಿದೆ. ಮೂರನೇ ಪಂದ್ಯದಲ್ಲಿ ಭಾರತದ ಮಣಿಕಾ ಬಾತ್ರಾ ಅವರು ಸಿಂಗಾಪುರದ ಯಿಹಾನ್ ಝೌ ವಿರುದ್ಧ 11-7 ಅಂತರದಿಂದ ಜಯ ಗಳಿಸಿದರು.ಮಣಿಕಾ ಬಾತ್ರಾ ಒಂದನೇ ಪಂದ್ಯದಲ್ಲಿ 11-7 ಹಾಗೂ ಎರಡನೇ ಪಂದ್ಯದಲ್ಲು 11-4 ಅಂತರದಿಂದ ಗೆಲುವು ಸಾಧಿಸಿದ್ದರು.

short by: Nithin / read more at KannadaPrabha