Skip to main content


ಅಪ್ರಾಪ್ತನಿಂದ್ಲೇ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನೀಚ ಕೃತ್ಯವೊಂದು ನಡೆದಿದೆ. 8 ವರ್ಷದ ಬಾಲಕಿ ಮೇಲೆ 14 ವರ್ಷದ ಬಾಲಕ ಅತ್ಯಾಚಾರ ಮಾಡಿದ್ದಾನೆ. ನಗರದ ಹೊರವಲಯದಲ್ಲಿರೋ ಹೊಲಕ್ಕೆ ಬಾಲಕಿ ಒಂಟಿಯಾಗಿ ತೆರೆಳಿದ್ಲು. ಪಕ್ಕದ ಹೊಲದಲ್ಲೇ ಕೆಲಸ ಮಾಡ್ತಿದ್ದ ಬಾಲಕ ಇದನ್ನು ಗಮನಿಸಿ, ಅವಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಘಟನೆಯಿಂದ ಆಘಾತಗೊಂಡಿದ್ದ ಬಾಲಕಿ ಹೆತ್ತವರಿಗೆ ವಿಷಯ ತಿಳಿಸಿರಲಿಲ್ಲ. ನೋವಿನಿಂದ ಒದ್ದಾಡುತ್ತಿದ್ಲು, ಅವಳನ್ನು ಪರೀಕ್ಷಿಸಿದ ವೈದ್ಯರು ಅತ್ಯಾಚಾರ ನಡೆದಿರುವುದಾಗಿ ಪೋಷಕರಿಗೆ ತಿಳಿಸಿದ್ದಾರೆ. ಬಾಲಕಿಯ ತಂದೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಬಾಲಕ ಕೂಡ ಅದೇ ಗ್ರಾಮದವನು. ಬಾಲಕಿಯ ತಂದೆ ಕೃಷಿಕನಾಗಿದ್ದು, ಮಗಳಿಗೆ ನ್ಯಾಯ ದೊರಕಿಸುವಂತೆ ಮನವಿ ಮಾಡಿದ್ದಾನೆ.   

short by Pawan / more at Kannadadunia


Comments