Skip to main content


90 ಸಾವಿರ ರೈಲ್ವೆ ಹುದ್ದೆಗಳಿಗೆ 2.3 ಕೋಟಿ ಅರ್ಜಿ ಸಲ್ಲಿಕೆ!

ಫೆ. 10 ರಂದು ರೈಲ್ವೆ ನೇಮಕಾತಿ ಮಂಡಳಿಯು ಒಟ್ಟು 89,409 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಇದುವರೆಗೂ ಬರೋಬ್ಬರಿ 2.37 ಕೋಟಿ ಅರ್ಜಿಗಳನ್ನು ರೈಲ್ವೆ ಇಲಾಖೆ ಸ್ವೀಕರಿಸಿದೆ. ರೈಲ್ವೆ ಇಲಾಖೆ ವಿಶ್ವದಲ್ಲಿಯೇ ಅತಿ ದೊಡ್ಡದು ಎನ್ನಲಾಗಿರುವ ಕಂಪ್ಯೂಟರ್ ಆಧರಿತ ಪರೀಕ್ಷೆ ನಡೆಸಲಿದ್ದು, ಕೆಲವು ಗಂಟೆಗಳಲ್ಲಿಯೇ ಪರೀಕ್ಷೆ ಮುಕ್ತಾಯವಾಗಲಿದೆ. ಈ ಹಿಂದೆ ಇಂಥ ಪರೀಕ್ಷೆಗೆ 2 ತಿಂಗಳುಗಳೇ ಬೇಕಾಗುತ್ತಿತ್ತು. ರೈಲ್ವೆ ಇಲಾಖೆಯು ಸಹಾಯಕ ಚಾಲಕರು, ಟೆಕ್ನೀಶಿಯನ್, ಹಾಗೂ ಇತರೆ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಭಾರಿ ಬೇಡಿಕೆ ಸೃಷ್ಟಿಯಾಗಿದೆ.         

short by Pawan / more at Kannada News Now

Comments