Skip to main content


ಮದುವೆಯಾಗಿ 9 ವರ್ಷವಾದ್ರೂ ಲೈಂಗಿಕ ಸಂಬಂಧ ಬೆಳೆಸದ ದಂಪತಿಗೆ ಕೋರ್ಟ್ ಹೇಳಿದ್ದೇನು?

ಮದುವೆ ನಂತ್ರವೂ ಲೈಂಗಿಕ ಸಂಬಂಧ ಬೆಳೆಸದೆ ಹೋದ್ರೆ ವಿಚ್ಛೇದನ ನೀಡಬಹುದೆಂದು ಬಾಂಬೆ ಹೈಕೋರ್ಟ್ ಹೇಳಿದೆ. ಕೊಲ್ಹಾಪುರ ದಂಪತಿಯೊಂದು ಮದುವೆ ದಿನವೇ ಕೋರ್ಟ್ ಮೆಟ್ಟಿಲೇರಿದ್ದರು. ಮದುವೆ ದಿನ ಪತಿ ಖಾಲಿ ಹಾಳೆಗೆ ಸಹಿ ಹಾಕಿಸಿಕೊಂಡಿದ್ದಾನೆ. ಹಾಗಾಗಿ ಈ ಮದುವೆ ರದ್ದು ಮಾಡಬೇಕೆಂದು ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದಳು. ಸತತ 9 ವರ್ಷಗಳ ಕಾಲ ಈ ಬಗ್ಗೆ ವಿಚಾರಣೆ ನಡೆದಿತ್ತು. ಪತಿ ವಂಚನೆ ಮಾಡಿದ್ದಾನೆ ಎನ್ನುವ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಆದ್ರೆ ಇಬ್ಬರ ನಡುವೆ 9 ವರ್ಷಗಳಿಂದ ಶಾರೀರಿಕ ಸಂಬಂಧ ಬೆಳೆದಿಲ್ಲ. ದಾಂಪತ್ಯಕ್ಕೆ ಸೆಕ್ಸ್ ಬಹಳ ಮುಖ್ಯ. ಆದ್ರೆ ಇಬ್ಬರ ನಡುವೆ ಸಂಬಂಧವೇ ಬೆಳೆದಿಲ್ಲ. ಇದು ವಿಚ್ಛೇದನ ನೀಡಲು ಒಂದು ಬಹುಮುಖ್ಯ ಕಾರಣವಾಗುತ್ತದೆ ಎಂದು ನ್ಯಾಯಮೂರ್ತಿ ಮೃದುಲಾ ಭಟ್ ತೀರ್ಪು ನೀಡಿದ್ದಾರೆ.         

short by Pawan / more at Kannadadunia

Comments