Skip to main content


BIGNEWS: ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ! ಸಿ.ಎಂ ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧೆ ಫಿಕ್ಸ್

ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಗೊಳಿಸಿದ್ದು, ಮೂರನೇ ಹಂತವಾಗಿ 11 ಮಂದಿಗೆ ಟಿಕೆಟ್ ಅನ್ನು ಘೋಷಣೆ ಮಾಡಿದೆ. ಇನ್ನು ಈ ಪಟ್ಟಿಯ ಇನ್ನೊಂದು ಪ್ರಮುಖ ಅಂಶವೆಂದರೆ ಸಿ.ಎಂ ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧೆ ಮಾಡುತ್ತಿದ್ದು ಫಿಕ್ಸ್ ಆಗಿದ್ದು, ಈ ಹಿಂದೆ ಬಾದಾಮಿಯಿಂದ ಸ್ಪರ್ಧೆ ಮಾಡಲು ಟಿಕೆಟ್ ನೀಡಲಾಗಿದ್ದ ದೇವರಾಜ್ ಅವರಿಗೆ ಕೊಕ್ ನೀಡಲಾಗಿದೆ. ತಿಪಟೂರಿನಿಂದ ಮತ್ತೆ ಹಾಲಿ ಶಾಸಕ ಕೆ.ಷಡಕ್ಷರಿಗೆ ಟಿಕೆಟ್ ನೀಡಲಾಗಿದ್ದು, ಈ ಹಿಂದೆ ನೀಡಲಾಗಿದ್ದ ಬಿ.ನಂಜಮರಿಗೆ ಟಿಕೆಟ್ ತಪ್ಪಿಸಿದ್ದಾರೆ. ಇದಲ್ಲದೇ ವಿವಾದಕ್ಕೆ ಕಾರಣವಾಗಿದ್ದ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ವಕೀಲ ಚಂದ್ರಮೌಳಿಯವರಿಗೆ ಟಿಕೆಟ್ ತಪ್ಪಿಸಿ ಕೆ.ಪಿ ಚಂದ್ರಕಲಾ ಅವರಿಗೆ ಟಿಕೆಟ್ ನೀಡಲಾಗಿದೆ.     

short by Pawan / more at Kannada News Now

Comments