Skip to main content


ವಿಡಿಯೊಕಾನ್‌ ಹಗರಣ: ಸಿಬಿಐ ತನಿಖೆ ಆರಂಭ

ವಿಡಿಯೊಕಾನ್‌ ಸಮೂಹಕ್ಕೆ ಐಸಿಐಸಿಐ ಬ್ಯಾಂಕ್‌ ₹ 3,250 ಕೋಟಿ ಸಾಲ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಆರಂಭಿಸಿದೆ.
ವಿಡಿಯೊಕಾನ್ ಅಧ್ಯಕ್ಷ ವೇಣುಗೋಪಾಲ್ ಧೂತ್‌ ಅವರು ಐಸಿಐಸಿಐ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಚಂದಾ ಕೊಚ್ಚರ್‌ ಅವರ ಪತಿ ದೀಪಕ್‌ ಕೊಚ್ಚರ್‌ ಅವರಿಗೆ ಸೇರಿದ ಎನ್‌ಯುಪವರ್‌ ರಿನಿವೇಬಲ್ಸ್‌ ಸಂಸ್ಥೆಗೆ ₹ 64 ಕೋಟಿ ನೀಡಿದ್ದಾರೆ ಎನ್ನುವ ಆರೋಪ ಇದೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಲಿದೆ.
2012ರಲ್ಲಿ ವಿಡಿಯೊಕಾನ್‌ ಸಮೂಹವು ₹ 3,250 ಕೋಟಿ ಸಾಲ ಪಡೆದ ಆರು ತಿಂಗಳ ಬಳಿಕ ₹ 64 ಕೋಟಿ ವರ್ಗಾವಣೆ ಆಗಿದೆ. ಧೂತ್‌ ಅವರು ಬ್ಯಾಂಕ್‌ನಿಂದ ಸಾಲ ಪಡೆದ ನಂತರ ಎನ್‌ಯುಪವರ್ ರಿನಿವೇಬಲ್ಸ್‌ ಸಂಸ್ಥೆಯ ಒಡೆತನವನ್ನೂ ದೀಪಕ್‌ ಅವರಿಗೆ ₹ 9 ಲಕ್ಷಕ್ಕೆ ಹಸ್ತಾಂತರಿಸಿದ್ದಾರೆ ಎನ್ನುವ ಆರೋಪವೂ ಇದೆ.     
short by NP/ read more at Prajavani