Skip to main content


ಕರ್ನಾಟಕ ಕುರುಕ್ಷೇತ್ರ - ಸಮೀಕ್ಷೆಯಲ್ಲಿ ಕರುನಾಡ ಕಿಂಗ್ ಯಾರು ?

ಕರ್ನಾಟಕ ಕುರುಕ್ಷೇತ್ರದಲ್ಲಿ ಯಾರಿಗೆ ಗೆಲುವು? ಯಾರಿಗೆ ಸೋಲು ಎನ್ನುವುದನ್ನು ಮತದಾರ ಪ್ರಭುಗಳು ನಿರ್ಧರಿಸಲು ಇನ್ನು 29 ದಿನಗಳು ಮಾತ್ರ ಬಾಕಿ ಇದೆ. ಇದರ ಮಧ್ಯೆ, ಚದುರಂಗದಾಟದ ಲೆಕ್ಕಾಚಾರ ಜೋರಾಗ್ತಿದೆ. ಕರ್ನಾಟಕದ ಚುನಾವಣೆ ಕುರಿತು ದೇಶಾದ್ಯಂತ ಭರ್ಜರಿ ಸರ್ವೆಗಳು ನಡೀತಿವೆ. ಇವತ್ತು ರಾಷ್ಟ್ರಮಟ್ಟದ ಖಾಸಗಿ ವಾಹಿನಿ ಇಂಡಿಯಾ ಟುಡೇ – ಖಾರ್ವಿ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದೆ. ಮಾರ್ಚ್ 17 ರಿಂದ ಏಪ್ರಿಲ್ 05 ರ ಅವಧಿಯಲ್ಲಿ ಜಂಟಿ ಸಮೀಕ್ಷೆ ನಡೆಸಿದ್ದು, 27 ಸಾವಿರಕ್ಕೂ ಹೆಚ್ಚು ಮತದಾರರ ಅಭಿಪ್ರಾಯವನ್ನು ಸಂಗ್ರಹಿಸಿ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟಿಸಿದೆ.   
      
short by NP/ read more at Public TV