Skip to main content


ಭಾನುವಾರದ ರಜೆ ಹಿಂದಿನ ಕಾರಣ ಏನು ಗೊತ್ತಾ? ರಜೆ ನೀಡುವಂತೆ ಮಾಡಿದವರು ಯಾರು ಗೊತ್ತಾ??

ಭಾನುವಾರ ಎಲ್ಲ ಶಾಲಾ ಕಾಲೇಜು ಹಾಗೂ ಕೆಲಸ ಕಾರ್ಯ ನಡೆಯುವ ಕಚೇರಿಗಳೆಲ್ಲವೂ ರಜೆ ಇರುವ ದಿನ. ಬರೀ ಸರಕಾರಿ ಕಚೇರಿಗಳಷ್ಟೇ ಅಲ್ಲದೆ ಖಾಸಗಿ ಕಚೇರಿ ಮತ್ತು ಶಾಲಾ ಕಾಲೇಜುಗಳಲ್ಲೂ ಸಹ ಭಾನುವಾರದ ದಿನ ರಜಾ ದಿನ. ಸಣ್ಣ ಮಕ್ಕಳಿಂದ ಹಿಡಿದು ಮುದುಕರವರೆಗೂ ಈ ವಿಷಯ ಎಲ್ಲರಿಗೂ ಗೊತ್ತು ಆದರೆ ಈ ರಜೆಯ ಹಿಂದಿನ ಕಾರಣ ಮತ್ತು ಕಾರಣಕರ್ತರು ನಾರಾಯಣ ಮೇಘಾಜಿ ಲೋಖಂಡೆಯವರು.ಇವರು ಬ್ರಿಟಿಷ್ ಅಧಿಕಾರವಿದ್ದ ಕಾಲದಲ್ಲಿ ತತ್ಯಶೋಧನಾ ಸಂಸ್ಥೆಯಲ್ಲಿ ಕಾರ್ಯಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದರು. ಆ ಸಂದರ್ಭದಲ್ಲಿ ನಾರಾಯಣ ಅವರು ಬ್ರಿಟಿಷರಿಗೆ ಭಾನುವಾರ ರಜಾ ನೀಡಬೇಕಾಗಿ ಬೇಡಿಕೆಯನ್ನಿಟ್ಟರು. ವಾರಪೂರ್ತಿ ದುಡಿಯುತ್ತೇನೆ ವಾರದ ಒಂದು ದಿನವಾದರೂ ಸಮಾಜದ ಒಳಿತಿಗಾಗಿ ಒಂದು ದಿನವನ್ನು ಮೀಸಲಿಡೋಣ ಎಂದು ಬ್ರಿಟಿಷರ ಬಳಿ ಕೇಳಿಕೊಂಡರು. ಆದರೆ ಇವರ ಬೇಡಿಕೆಗಳನ್ನು ತಿರಸ್ಕರಿಸಿದ ಬ್ರಿಟಿಷರು ರಜೆಯನ್ನು ಘೋಷಿಸಲಿಲ್ಲ ತದನಂತರ ಇವರು ಕೆಲಸಕ್ಕೆ ರಾಜೀನಾಮೆಯನ್ನು ಸಲ್ಲಿಸಿದರು. ನಂತರ ಎಂಟು ವರ್ಷಗಳ ಸತತ ಪ್ರತಿಭಟನೆಯ ಪರಿಣಾಮ ಬ್ರಿಟಿಷರು ಇವರ ಬೇಡಿಕೆಗೆ ಮಣಿದು ಭಾನುವಾರದ ದಿನವನ್ನು ರಜಾ ದಿನವಾಗಿ ಘೋಷಿಸಿದರು.

short by: Nithin