Skip to main content


ಪತ್ನಿ, ಪುತ್ರನೊಂದಿಗೆ ಎಬಿಡಿ ಆಟೋದಲ್ಲಿ ಪ್ರಯಾಣ! ಡಿ ವಿಲಿಯರ್ಸ್‌ ಕುಟುಂಬದ ಕನ್ನಡ ಪ್ರೇಮಕ್ಕೆ ಮೆಚ್ಚುಗೆ

‘ಮಿಸ್ಟರ್‌ 360 ಡಿಗ್ರಿ’ ಖ್ಯಾತಿಯ ಎಬಿ ಡಿ’ವಿಲಿಯರ್ಸ್‌, ಪತ್ನಿ ಹಾಗೂ ಪುತ್ರನೊಂದಿಗೆ ನಗರದಲ್ಲಿ ಆಟೋ ಪ್ರಯಾಣಿಸಿ ಎಲ್ಲರ ಗಮನ ಸೆಳೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್ ವೈರಲ್ ಆಗಿದೆ. ಪತ್ನಿ ಡೆನಿಯೆಲ್‌ ಮತ್ತು ಅಬ್ರಹಾಮ್‌ ಡಿ’ವಿಲಿಯರ್ಸ್‌ ಜತೆ ಎಬಿಡಿ ಗುರುವಾರ ಬೆಳಗ್ಗೆ ತಂಡ ತಂಗಿದ್ದ ಹೋಟೆಲ್‌ನಿಂದ ಆಟೋದಲ್ಲಿ ಸುತ್ತಾಡಲು ತೆರಳಿದ್ದರು. ಡಿ’ವಿಲಿಯರ್ಸ್‌ ಕುಟುಂಬ ಆಟೋದಲ್ಲಿರುವುದನ್ನು ಗಮನಿಸಿದ ಕೆಲ ಅಭಿಮಾನಿಗಳು, ಬೈಕ್‌ನಲ್ಲಿ ಹಿಂಬಾಲಿಸಿದ್ದು ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ಇದೇ ವೇಳೆ ಆಟೋದಲ್ಲಿ ತೆರಳುತ್ತಲೇ ಅಭಿಮಾನಿಗಳೊಂದಿಗೆ  ಎಬಿಡಿ ‘ಈ ಸಲ ಕಪ್‌ ನಮ್ದೇ’ ಎಂಬ ಆರ್‌ಸಿಬಿ ತಂಡದ ಘೋಷ ವಾಕ್ಯವನ್ನು ಕೂಗಿದರು. ವಿಶೇಷ ಎಂದರೆ ಎಬಿಡಿ ಪತ್ನಿ ಮತ್ತು 3 ವರ್ಷದ ಮಗ ಕೂಡ ‘ಈ ಸಲ ಕಪ್‌ ನಮ್ದೇ’ ಎಂದು ಕೂಗಿದ್ದಾರೆ. ಡಿ’ವಿಲಿಯರ್ಸ್‌ ಕುಟುಂಬದ ಕನ್ನಡ ಪ್ರೇಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.          

short by Prajwal / more at Newspoint


Comments