Skip to main content


ಆರೇಂಜ್ ಕ್ಯಾಪ್ ಧರಿಸಲು ವಿರಾಟ್‍ ಕೊಹ್ಲಿ ನಿರಾಕರಿಸಿದ್ದೇಕೆ..?

ಸತತ ಸೋಲಿನಿಂದ ಆರ್‍ಸಿಬಿ ನಾಯಕ ವಿರಾಟ್ ಕೊಹ್ಲಿ ಕುಪಿತರಾಗಿ ದ್ದಾರೆಯೇ..? ಹೌದು ಎನ್ನುತ್ತಿದೆ ನಿನ್ನೆ ಅವರು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದುಕೊಂಡ ವರ್ತನೆ. ರೋಹಿತ್‍ ಶರ್ಮಾ ಬಳಗ ನೀಡಿದ್ದ 214 ಬೃಹತ್ ರನ್‍ಗಳ ಸವಾಲನ್ನು ಎದುರಿಸಲು ಆರ್‍ಸಿಬಿ ಬ್ಯಾಟಿಂಗ್ ಮಾಡಲು ಬಂದಾಗಲೂ ಕೂಡ ಕೊಹ್ಲಿ ಕುಪಿತ ರಾಗಿಯೇ ಇದ್ದರು. ಕ್ಲಿಂಟನ್ ಡಿ ಕಾಕ್, ಎಬಿಡಿ, ಮನ್‍ದೀಪ್‍ಸಿಂಗ್, ಕೋರಿ ಆಂಡ್ರರ್ಸನ್ ಔಟಾದರೂ ಕೂಡ ಏಕಾಂಗಿ ಹೋರಾಡಿದ ವಿರಾಟ್ ಕೊಹ್ಲಿ ಟೂರ್ನಿಯಲ್ಲಿ 201 ರನ್ ಸೇರಿಸಿ ಆರೇಂಜ್ ಕ್ಯಾಪ್‍ಗೆ ಪುರಸ್ಕ್ರುತರಾದರೂ ಕೂಡ ಅದನ್ನು ಪಡೆಯಲು ಕೊಹ್ಲಿ ನಿರಾಕರಿಸಿದರು. ಈ ವೇಳೆ ಮಾತನಾಡಿದ ಕೊಹ್ಲಿ, ಪಂದ್ಯವನ್ನು ಗೆಲ್ಲಬೇಕಾದರೆ 40-45 ರನ್‍ಗಳ ಜೊತೆಯಾಟ ಸಾಕಾಗುವುದಿಲ್ಲ , ಅದರ ಬದಲಿಗೆ 80-85 ರನ್‍ಗಳ ದೊಡ್ಡ ಇನ್ನಿಂಗ್ಸ್ ಬೇಕಾಗುತ್ತದೆ ಎಂದು ಹೇಳಿರುವುದನ್ನು ನೋಡಿದರೆ ಅವರಿಗೆ ತಂಡದ ಆಗ್ರಮಾನ್ಯ ಬ್ಯಾಟ್ಸ್‍ಮನ್‍ಗಳ ಮೇಲಿರುವ ಕೋಪವನ್ನು ತೋರಿಸುವಂತಿತ್ತು.

short by: Prajwal


Comments