Skip to main content


ಮಹಿಳೆಯರ ಶೂಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ಹೀನಾ ಸಿಧು

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನ ಮಹಿಳೆಯರ 25 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಹೀನಾ ಸಿಧು ಚಿನ್ನ ಗೆದ್ದಿದ್ದಾರೆ. ಇದು ಕ್ರೀಡಾಕೂಟದಲ್ಲಿ ಹೀನಾ ಸಿಧು ಅವರ ಎರಡನೆಯ ಪದಕವಾಗಿದೆ. 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಅವರು ಭಾನುವಾರ ಬೆಳ್ಳಿ ಪದಕ ಜಯಿಸಿದ್ದರು. 38 ಅಂಕ ಪಡೆದ ಹೀನಾ ಸಿಧು ಮೊದಲ ಸ್ಥಾನ ಗಳಿಸಿದರು. ಅವರಿಗೆ ಪೈಪೋಟಿ ನೀಡಿದ ಆಸ್ಟ್ರೇಲಿಯಾದ ಎಲೆನಾ ಗಲಿಯಾಬೊವಿಚ್ 35 ಅಂಕಗಳೊಂದಿಗೆ ಬೆಳ್ಳಿ ಪದಕಕ್ಕೆ ತೃಪ್ತಿ ಪಡೆದುಕೊಂಡರು. ಮಲೇಷ್ಯಾದ ಅಲಿಯಾ ಸಾಜನಾ ಅಜಹರಿ ಕಂಚಿನ ಪದಕ ಜಯಿಸಿದರು. ಇದು ಕ್ರೀಡಾಕೂಟದಲ್ಲಿ ಭಾರತಕ್ಕೆ ಒಲಿದ 11ನೆಯ ಸ್ವರ್ಣ ಪದಕವಾಗಿದೆ. ಮತ್ತೊಬ್ಬ ಶೂಟರ್ ಅನ್ನುಸಿಂಗ್ ಆರನೇ ಸ್ಥಾನ ಪಡೆದರು.

Short by Prajwal / read more at Oneindia

Comments