Skip to main content


ಪೂರಿ ಜಗನ್ನಾಥ್ ಮಗನ ಜೊತೆ 'ಮುಂಗಾರು ಮಳೆ' ಹುಡುಗಿ.!

ಟಾಲಿವುಡ್ ಸ್ಟಾರ್ ಡೈರೆಕ್ಟರ್ ಪೂರಿ ಜಗನ್ನಾಥ್ ಅವರ ಪೂರಿ ಆಕಾಶ್ ಅಭಿನಯದ ಚೊಚ್ಚಲ ಚಿತ್ರದಲ್ಲಿ ಕನ್ನಡ ನಟಿ ನೇಹಾ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರದ ಟ್ರೈಲರ್ ಈಗ ಬಿಡುಗಡೆಯಾಗಿದ್ದು, ಸಿನಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ. 'ಮೆಹಬೂಬ್' ಎಂದು ಚಿತ್ರಕ್ಕೆ ಟೈಟಲ್ ಇಟ್ಟಿದ್ದು, ಭಾರತ ಮತ್ತು ಪಾಕಿಸ್ತಾನ ಗಡಿಭಾಗದಲ್ಲಿ ನಡೆಯುವ ರೋಚಕ ಪ್ರೇಮಕಥೆಯನ್ನ ಒಳಗೊಂಡಿದೆ. ನಾಯಕ ಪೂರಿ ಆಕಾಶ್ ಭಾರತದ ಸೈನಿಕನಾಗಿ ಕಾಣಿಸಿಕೊಂಡಿದ್ರೆ, ನೇಹಾ ಶೆಟ್ಟಿ ಪಾಕಿಸ್ತಾನದ ಹುಡುಗಿಯಾಗಿ ಪಾತ್ರವನ್ನ ನಿಭಾಯಿಸಿದ್ದಾರೆ. ಟ್ರೈಲರ್ ಮೂಲಕ ಸದ್ದು ಮಾಡುತ್ತಿರುವ ಮೆಹಬೂಬ್ ಮೇ 11 ರಂದು ತೆರೆಕಾಣುತ್ತಿದೆ.

short by: Nithin / read more at 60secondsnow


Comments